Home » Kannada News » ಗ್ರಾಹಕರಿಗೆ ಗುಡ್‌ನ್ಯೂಸ್‌; ದೇಶದಲ್ಲಿ ಪೆಟ್ರೋಲ್‌ ಬೆಲೆ ಇಳಿಕೆಯ ಸಾಧ್ಯತೆ

ಗ್ರಾಹಕರಿಗೆ ಗುಡ್‌ನ್ಯೂಸ್‌; ದೇಶದಲ್ಲಿ ಪೆಟ್ರೋಲ್‌ ಬೆಲೆ ಇಳಿಕೆಯ ಸಾಧ್ಯತೆ


ಹೊಸದಿಲ್ಲಿ: ದೇಶದ ಬಹುತೇಕ ಭಾಗಗಳಲ್ಲಿ ಶತಕದ ಗಡಿ ದಾಟಿರುವ ಪೆಟ್ರೋಲ್‌, ಡೀಸೆಲ್‌ ದರ ಕಡಿಮೆಯಾಗುವ ಸೂಚನೆ ದೊರೆತಿದೆ.

ಕಚ್ಚಾ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ ‘ಒಪೆಕ್‌’ ಮತ್ತು ಇತರ ದೇಶಗಳು ಉತ್ಪಾದನೆಯನ್ನು ಹೆಚ್ಚಿಸಲು ತೀರ್ಮಾನಿಸಿವೆ. ಒಪೆಕ್‌ ಮತ್ತು ರಷ್ಯಾ ಕೂಡ ಉತ್ಪಾದನೆಯನ್ನು ದಿನಕ್ಕೆ 400000 ಬ್ಯಾರೆಲ್‌ ನಷ್ಟು ಹೆಚ್ಚಿಸಲು ನಿರ್ಧರಿಸಿವೆ. ಬೇಡಿಕೆ ಹೆಚ್ಚಿದ್ದರೂ ಉದ್ದೇಶಪೂರ್ವಕವಾಗಿ ಉತ್ಪಾದನೆ ಕಡಿತಗೊಳಿಸಿದ್ದರಿಂದ ಕಚ್ಚಾತೈಲ ಬೆಲೆ ಗಗನಕ್ಕೇರಿದೆ.

ಉತ್ಪಾದನೆ ಹೆಚ್ಚಳದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಬ್ಯಾರೆಲ್‌ 73 ಡಾಲರ್‌ ಇರುವ ಕಚ್ಚಾತೈಲ ದರ ಇಳಿಮುಖವಾಗಲಿದ್ದು, ಆ ಮೂಲಕ ರಿಟೇಲ್‌ ದರವೂ ಇಳಿಕೆಗೆ ಹಾದಿಯಾಗಲಿದೆ. ಭಾರತದ ನಿತ್ಯ ಬಳಕೆಯ ಶೇ.44ರಷ್ಟು ಪ್ರಮಾಣದ ಹೆಚ್ಚುವರಿ ತೈಲವನ್ನು ಒಪೆಕ್‌ ಮತ್ತಿತರ ದೇಶಗಳಿಂದ ಖರೀದಿಸುತ್ತದೆ.


Source link

x

Check Also

ಟೋಕಿಯೋ ಒಲಿಂಪಿಕ್ಸ್‌: ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟ ಕುಸ್ತಿಪಟು ರವಿ ಕುಮಾರ್!

ಹೈಲೈಟ್ಸ್‌: ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾ ಕೂಟದ ಕುಸ್ತಿ ಸ್ಪರ್ಧೆ. ಪುರುಷರ 57 ಕೆಜಿ ಫ್ರೀ ಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಭಾರತಕ್ಕೆ ...