Home » Kannada News » ಅಂತೂ ಕಾನೂನಿಗೆ ತಲೆ ಬಾಗಿದ ಖ್ಯಾತ ನಟ ದಳಪತಿ ವಿಜಯ್ !

ಅಂತೂ ಕಾನೂನಿಗೆ ತಲೆ ಬಾಗಿದ ಖ್ಯಾತ ನಟ ದಳಪತಿ ವಿಜಯ್ !

ಹೈಲೈಟ್ಸ್‌:

  • ನಟ ದಳಪತಿ ವಿಜಯ್ ಅವರಿಗೆ ಡಂ ಕಟ್ಟುವಂತೆ ಆದೇಶವಿತ್ತ ಕೋರ್ಟ್
  • ವಿದೇಶದಿಂದ ಕಾರ್ ಆಮದುಕೊಂಡಿದ್ದ ನಟ ದಳಪತಿ ವಿಜಯ್
  • ಕೋರ್ಟ್ ಆದೇಶದಂತೆ ದಂಡ ಪಾವತಿಸಿದ ನಟ ದಳಪತಿ ವಿಜಯ್

ನಟ ದಳಪತಿ ವಿಜಯ್ ಅವರು ರೋಲ್ಸ್ ರಾಯ್ಸ್ ಕಾರ್‌ ಪ್ರವೇಶದ ಪೂರ್ತಿ ತೆರಿಗೆಯನ್ನು ಕಟ್ಟಿದ್ದಾರೆ. ಈ ಹಿಂದೆ ಅವರು ಮದ್ರಾಸ್ ಹೈಕೋರ್ಟ್‌ನಲ್ಲಿ ಅಬ್ರಾಡ್‌ನಿಂದ ತರಿಸಿಕೊಂಡ ದುಬಾರಿ ಕಾರಿಗೆ ತೆರಿಗೆ ಕಟ್ಟಲು ವಿನಾಯಿತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

ತೆರಿಗೆ ವಿನಾಯಿತಿ ಕೇಳಿದ್ದಕ್ಕಾಗಿ ದಳಪತಿ ವಿಜಯ್ ಅವರ ಅರ್ಜಿ ವಿಚಾರಣೆ ದೊಡ್ಡ ಚರ್ಚೆಯಾಯ್ತು. ಆನಂತರದಲ್ಲಿ ಅವರಿಗೆ ನ್ಯಾಯಾಧೀಶರು 1 ಲಕ್ಷ ರೂಪಾಯಿ ದಂಡ ಕಟ್ಟುವಂತೆ ಹೇಳಿದರು. ಅಷ್ಟೇ ಅಲ್ಲದೆ ಕ್ಷಮೆ ಕೇಳುವಂತೆ ಹೇಳಿದ್ದರು. ನ್ಯಾಯಾಧೀಶರು ನೀಡಿದ ಕಟುವಾದ ಹೇಳಿಕೆ ವಿರುದ್ಧ ವಿಜಯ್ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಐಷಾರಾಮಿ ಕಾರಿಗೆ ತೆರಿಗೆ ವಿನಾಯಿತಿ ಕೇಳಿದ್ದ ನಟ ಧನುಷ್‌ ಮೇಲೆ ಮದ್ರಾಸ್‌ ಹೈಕೋರ್ಟ್ ಗರಂ!

ಆ ನಂತರದಲ್ಲಿ ನ್ಯಾಯಾಧೀಶರಾದ ಎಂ ದೊರೈಸ್ವಾಮಿ ಹಾಗೂ ಆರ್ ಹೇಮಲತಾ ಅವರು ಮರು ವಿಚಾರಣೆ ನಡೆಸಿ ದಳಪತಿ ವಿಜಯ್ ಅವರಿಗೆ 1 ಲಕ್ಷ ರೂಪಾಯಿ ತೆರಿಗೆ ಕಟ್ಟುವಂತೆ ಹೇಳಿದ್ದಾರೆ. ವಿಜಯ್ ಅವರ ವಕೀಲರು ತೆರಿಗೆ ಕಟ್ಟಲು ಒಪ್ಪಿದ್ದಾರೆ. ಈಗ ವಿಜಯ್ ರೋಲ್ಸ್ ರಾಯ್ಸ್ ಕಾರ್‌ನ ಸಂಪೂರ್ಣ ತೆರಿಗೆ ಕಟ್ಟಿದ್ದಾರೆ. ಒಟ್ಟಾರೆಯಾಗಿ ವಿಜಯ್ 40 ಲಕ್ಷ ರೂಪಾಯಿ ತೆರಿಗೆ ಕಟ್ಟಿದ್ದಾರೆ.

ಇತ್ತೀಚೆಗೆ ನಟ ಧನುಷ್ ಅವರು ಕೂಡ 2015ರಲ್ಲಿ ಖರೀದಿ ಮಾಡಿದ ರೋಲ್ಸ್ ರಾಯ್ಸ್ ಕಾರ್‌ಗೆ ತೆರಿಗೆ ಕಟ್ಟಿಲ್ಲ ಎಂದು ಆರೋಪ ಮಾಡಲಾಗಿತ್ತು. ಆ ನಂತರದ 48 ಗಂಟೆಯೊಳಗಡೆ ಧನುಷ್ ಅವರ ತಂಡ ದಂಡವನ್ನು ಕಟ್ಟಿದೆ.

ಐಷಾರಾಮಿ ಕಾರ್‌ ವಿಚಾರಕ್ಕೆ ನಟ ದಳಪತಿ ವಿಜಯ್‌ಗೆ ದಂಡ ವಿಧಿಸಿದ ಹೈಕೋರ್ಟ್!

ದಳಪತಿ ವಿಜಯ್ ಅವರು ‘ಬೀಸ್ಟ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ನಟ ಧನುಷ್ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಕೂಡ ಮಾತು ಬರುತ್ತಿದೆ. ಆದರೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿಲ್ಲ.


Source link

x

Check Also

ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಹೈಲೈಟ್ಸ್‌: ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ ಪ್ರಕಟ ಮೊದಲ ಸ್ಥಾನದಲ್ಲೇ ಮುಂದಿವರಿದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಗೌತಮ್‌ ಅದಾನಿಗೆ ...