Home » Kannada News » ಅಸ್ಸಾಂ – ಮಿಜೋರಾಂ ಸಂಧಾನ ಯಶಸ್ವಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಉಭಯ ರಾಜ್ಯಗಳ ಸಮ್ಮತಿ

ಅಸ್ಸಾಂ – ಮಿಜೋರಾಂ ಸಂಧಾನ ಯಶಸ್ವಿ: ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಉಭಯ ರಾಜ್ಯಗಳ ಸಮ್ಮತಿ

ಹೈಲೈಟ್ಸ್‌:

  • ಮೊದಲ ಸಂಧಾನ ಸಭೆ ಬಹುತೇಕ ಯಶಸ್ವಿ
  • ಬಿಕ್ಕಟ್ಟು ಶಮನಕ್ಕೆ ಉಭಯ ರಾಜ್ಯಗಳ ಒಪ್ಪಿಗೆ
  • ಉಭಯ ರಾಜ್ಯಗಳು ಮೆತ್ತಗಾಗಲು ಕೇಂದ್ರದ ಮಧ್ಯಸ್ಥಿಕೆಯೂ ಕಾರಣ

ಐಜ್ವಾಲ್‌: ಅಸ್ಸಾಂ ಹಾಗೂ ಮಿಜೋರಾಂ ರಾಜ್ಯಗಳ ಗಡಿಯಲ್ಲಿ ನಡೆದ ಸಂಘರ್ಷದ ಬಳಿಕ ಕೊನೆಗೂ ಉಭಯ ರಾಜ್ಯಗಳ ಪ್ರತಿನಿಧಿಗಳ ನಡುವೆ ನಡೆದ ಮೊದಲ ಸಂಧಾನ ಸಭೆ ಬಹುತೇಕ ಯಶಸ್ವಿಯಾಗಿದೆ.

‘ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಕ್ರಮ ಕೈಗೊಳ್ಳುವುದರ ಜತೆಗೆ ಶಾಂತಿಯುತವಾಗಿ ಗಡಿ ಬಿಕ್ಕಟ್ಟು ಶಮನಗೊಳಿಸಲು ಎರಡೂ ರಾಜ್ಯಗಳು ಒಪ್ಪಿಗೆ ಸೂಚಿಸಿವೆ. ಅಂತಾರಾಜ್ಯ ವಾಹನಗಳ ಓಡಾಟಕ್ಕೆ ಅನುಮತಿ ನೀಡಲು ಹಾಗೂ ಗಡಿಯಿಂದ ಪೊಲೀಸ್‌ ಸಿಬ್ಬಂದಿ ವಾಪಸ್‌ ಪಡೆಯಲು ತೀರ್ಮಾನಿಸಲಾಗಿದೆ’ ಎಂದು ಸಭೆ ಬಳಿಕ ಜಂಟಿ ಪ್ರಕಟಣೆ ತಿಳಿಸಿದೆ.

ಅಸ್ಸಾಂ ಗಡಿ ಪ್ರದೇಶ ಅಭಿವೃದ್ಧಿ ಸಚಿವ ಅತುಲ್‌ ಬೋರಾ, ಗಡಿ ಅಭಿವೃದ್ಧಿ ಇಲಾಖೆ ಆಯುಕ್ತ ಜಿ. ಡಿ. ತ್ರಿಪಾಠಿ, ಮಿಜೋರಾಂ ಗೃಹ ಸಚಿವ ಲಾಲ್‌ ಚಮ್ಲಿಯಾನ ಹಾಗೂ ಗೃಹ ಕಾರ್ಯದರ್ಶಿ ವನಲಾಲಂಗತ್ಸಕ ಅವರು ಐಜ್ವಾಲ್‌ನಲ್ಲಿ ಸಭೆ ನಡೆಸಿದ್ದು, ಗಡಿಯಲ್ಲಿ ಅಗತ್ಯ ವಸ್ತುಗಳ ಸರಬರಾಜಿಗೂ ಸಮ್ಮತಿ ಸೂಚಿಸಲಾಗಿದೆ.

ಅಸ್ಸಾಂ- ಮಿಜೋರಾಂ ಗಡಿಯಲ್ಲಿ ಭಾರಿ ಹಿಂಸಾಚಾರ: ಐವರು ಪೊಲೀಸರ ಸಾವು
ಕಳೆದ ತಿಂಗಳಿಂದ ಅಸ್ಸಾಂ – ಮಿಜೋರಾಂ ಗಡಿಯಲ್ಲಿ ನಡೆಯುತ್ತಿರುವ ಸಂಘರ್ಷ ಜುಲೈ 26ರಂದು ಹಿಂಸಾಚಾರಕ್ಕೆ ತಿರುಗಿ, ಅಸ್ಸಾಂನ ಐವರು ನಾಗರಿಕರು ಹಾಗೂ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮಿಜೋರಾಂ ಸರಕಾರವು ಅಸ್ಸಾಂ ಮುಖ್ಯಮಂತ್ರಿ, ಕೆಲ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದೆ.

ಈಶಾನ್ಯ ರಾಜ್ಯಗಳ ವಿವಾದ ಪರಿಹರಿಸಲು ಸೂತ್ರ ಸಿದ್ಧ: ಉಪಗ್ರಹದ ಮೂಲಕ ಗಡಿ ಗುರುತಿಸಲು ನಿರ್ಧಾರ
ಕೇಂದ್ರದ ಮಧ್ಯಸ್ಥಿಕೆ: ಉಭಯ ರಾಜ್ಯಗಳು ಶಾಂತಿ ಸ್ಥಾಪನೆಗೆ ಒಪ್ಪಿಗೆ ಸೂಚಿಸಲು ಕೇಂದ್ರ ಸರಕಾರದ ಮಧ್ಯಸ್ಥಿಕೆಯೂ ಕಾರಣವಾಗಿದೆ. ಹಿಂಸೆ ನಡೆದ ದಿನವೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ಪರಿಸ್ಥಿತಿ ತಿಳಿಗೊಳಿಸುವಂತೆ ಸೂಚಿಸಿದ್ದರು.

ಅಲ್ಲದೆ, ಜುಲೈ 28ರಂದು ಕೇಂದ್ರ ಗೃಹ ಸಚಿವಾಲಯದ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ, ಶಾಂತಿ ಕಾಪಾಡುವಂತೆ ಸೂಚಿಸಲಾಗಿತ್ತು. ಅಲ್ಲದೆ, ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳಲಾಗಿತ್ತು.

ಗಡಿ ಹಿಂಸಾಚಾರ: ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ವಿರುದ್ಧ ಮಿಜೋರಾಂನಲ್ಲಿ ಎಫ್‌ಐಆರ್


Source link

x

Check Also

ವರಮಹಾಲಕ್ಷ್ಮೀ ಹಬ್ಬದ ದಿನ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೇಗಿದೆ ಗೊತ್ತಾ? ಈ ಸುದ್ದಿ ಓದಿ

ಹೈಲೈಟ್ಸ್‌: ಚಿನ್ನ ಬೆಳ್ಳಿಯ ದರದಲ್ಲಿ ಮತ್ತೆ ಮುಂದುವರಿದ ಹಾವು ಏಣಿಯಾಟ ಈ ವಾರ ಚಿನ್ನಾಭರಣ ಬೆಲೆ ಇಳಿಕೆಯ ಆಸೆ ಕಂಡಿದ್ದ ...