Home » Kannada News » ಎಂಟನೇ ಅದ್ಭುತ: ಮಂಜು ಜೊತೆಗಿನ ಮುನಿಸು ಮರೆತು ‘ಓ ಗೆಳೆಯ..’ ಎಂದ ಪ್ರಶಾಂತ್ ಸಂಬರಗಿ!

ಎಂಟನೇ ಅದ್ಭುತ: ಮಂಜು ಜೊತೆಗಿನ ಮುನಿಸು ಮರೆತು ‘ಓ ಗೆಳೆಯ..’ ಎಂದ ಪ್ರಶಾಂತ್ ಸಂಬರಗಿ!

ಹೈಲೈಟ್ಸ್‌:

  • ‘ಬಿಗ್ ಬಾಸ್’ ಮನೆಯಲ್ಲಿ ನಡೆದಿದೆ ಅಚ್ಚರಿಯ ಘಟನೆ!
  • ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ಮತ್ತೆ ಚಿಗುರಿದೆ ಸ್ನೇಹ
  • ”ಮಂಜು ಈಸ್ ಮೈ ಬೆಸ್ಟ್ ಫ್ರೆಂಡ್” ಎಂದ ಪ್ರಶಾಂತ್ ಸಂಬರಗಿ

ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ಎಲ್ಲವೂ ಸರಿ ಇರಲಿಲ್ಲ. ಇಬ್ಬರ ಮಧ್ಯೆ ಮುನಿಸು ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೀಗ ಮನಸ್ತಾಪವನ್ನು ಮರೆತು, ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮತ್ತೆ ಒಂದಾಗಿದ್ದಾರೆ.

ಹೌದು.. ನಿಮಗೆ ಅಚ್ಚರಿ ಎನಿಸಿದರೂ ಇದೇ ಸತ್ಯ! ‘ಬಿಗ್ ಬಾಸ್ ಕನ್ನಡ 8′ ಕಾರ್ಯಕ್ರಮದ ಎಂಟನೇ ಅದ್ಭುತ ಇದೇ! ಹಳೆಯದ್ದನ್ನೆಲ್ಲಾ ಮರೆತಿರುವ ಪ್ರಶಾಂತ್ ಸಂಬರಗಿ, ”ಓ ಗೆಳೆಯ.. ಜೀವದ ಗೆಳೆಯ..” ಅಂತ ಮಂಜು ಪಾವಗಡಗಾಗಿ ಹಾಡು ಹಾಡಿದ್ದಾರೆ.

ಅಸಲಿಗೆ, ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ಆರಂಭಿಕ ದಿನಗಳಲ್ಲಿ ಮಂಜು ಪಾವಗಡ ಹಾಗೂ ಪ್ರಶಾಂತ್ ಸಂಬರಗಿ ಕ್ಲೋಸ್‌ ಆಗಿಯೇ ಇದ್ದರು. ಮದುವೆ ನಾಟಕ ಆಡುವಾಗ ಪ್ರಶಾಂತ್ ಸಂಬರಗಿರನ್ನ ‘ಮಾವ’ ಅಂತ ಕರೆಯಲು ಮಂಜು ಪಾವಗಡ ಆರಂಭಿಸಿದ್ದರು. ಅಂದಿನಿಂದ ‘ಬಿಗ್ ಬಾಸ್’ ಮನೆಯಲ್ಲಿ ಎಲ್ಲರೂ ಪ್ರಶಾಂತ್ ಸಂಬರಗಿರನ್ನ ‘ಮಾವ’ ಅಂತಲೇ ಕರೆಯುತ್ತಿದ್ದರು.

‘ಬಿಗ್ ಬಾಸ್’ ಕಿವಿಯಲ್ಲಿ ಈಡೇರದ ಆಸೆಗಳನ್ನು ಹೇಳಿಕೊಂಡ ಸ್ಪರ್ಧಿಗಳು! ತಥಾಸ್ತು ಅಂತಾರಾ ಶಿವಣ್ಣ?
ಆದರೆ, ‘ಬಿಗ್ ಬಾಸ್’ ಮನೆಗೆ ಚಕ್ರವರ್ತಿ ಚಂದ್ರಚೂಡ್ ಎಂಟ್ರಿಕೊಟ್ಟ ಮೇಲೆ ‘ಮಾವ’ ವಿಚಾರಕ್ಕೆ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ವಾಕ್ಸಮರ ನಡೆಯಿತು. ಅಲ್ಲಿಂದ ಪ್ರಶಾಂತ್ ಸಂಬರಗಿ ಮತ್ತು ಮಂಜು ಪಾವಗಡ ಮಧ್ಯೆ ಎಲ್ಲವೂ ಸರಿಯಿರಲಿಲ್ಲ, ಮಾತುಕತೆ ಹೆಚ್ಚಾಗಿ ನಡೆಯುತ್ತಿರಲಿಲ್ಲ, ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು.

ಪ್ರಶಾಂತ್ ಸಂಬರಗಿ ಆಸೆ ಈಡೇರಿತು: ‘ಬಿಗ್ ಬಾಸ್’ ಮನೆಯಲ್ಲಿ ಫ್ಯಾಮಿಲಿ ಫೋಟೋ!
ಇದೀಗ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ.. ಇಬ್ಬರೂ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದ್ದಾರೆ. ಹೀಗಾಗಿ ಆಗಿದ್ದನ್ನೆಲ್ಲವನ್ನೂ ಮರೆತು ಇಬ್ಬರೂ ಮತ್ತೆ ಫ್ರೆಂಡ್ಸ್ ಆಗಿದ್ದಾರೆ. ಮಂಜು ಪಾವಗಡಗೆ ”ಕಾಫಿ ಮಾಡಿಕೊಡ್ಲಾ? ತಲೆಗೆ ಮಸಾಜ್ ಮಾಡ್ಲಾ?” ಅಂತೆಲ್ಲಾ ಪ್ರಶಾಂತ್ ಸಂಬರಗಿ ಕೇಳಿದ್ದಾರೆ. ಸಾಲದಕ್ಕೆ, ”ಮಂಜು ಈಸ್ ಮೈ ಬೆಸ್ಟ್ ಫ್ರೆಂಡ್” ಅಂತ ಪ್ರಶಾಂತ್ ಸಂಬರಗಿ ಹೇಳಿದ್ದಾರೆ. ಅತ್ತ ಮಂಜು ಪಾವಗಡ ಕೂಡ ”ಬ್ರದರ್ ಫ್ರಮ್ ಅನದರ್ ಮದರ್” ಅಂತ ಹಾಡು ಹಾಡಿದ್ದಾರೆ.

BBK8: ಗ್ರ್ಯಾಂಡ್ ಫಿನಾಲೆಗೆ ಲಗ್ಗೆ ಇಟ್ಟ ಐವರು: ಗೆಲುವಿನ ಕಿರೀಟ ಯಾರಿಗೆ?
ಅಂದ್ಹಾಗೆ, ಮಂಜು ಪಾವಗಡ ಮತ್ತು ಪ್ರಶಾಂತ್ ಸಂಬರಗಿ ಮಧ್ಯೆ ಮತ್ತೆ ಸ್ನೇಹ ಚಿಗುರಿರುವುದು ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.


Source link

x

Check Also

ಚಂಡಮಾರುತದ ರೌದ್ರ ರೂಪ ಕಂಡಾಗ.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 20

ಕಳೆದ ವಾರ ಮನುಷ್ಯನ ಮಾನಸಿಕ ಅಸ್ವಸ್ಥತೆಯಿಂದ ಆದ ವೈಪರೀತ್ಯ ನೋಡಿದ್ದೆವು. ಅವನಿಂದ ಗುಂಡುಗಳು ಹಾರಿದವು, ಸಿಕ್ಕಿಕೊಂಡ ಮೇಲೆ ವಿಚಾರಣೆಯಾಯ್ತು, ಇಂಜೆಕ್ಷನ್ ...