Home » Kannada News » ಎಲೆಕ್ಟ್ರಿಕ್‌ ವಾಹನಗಳ ಆಮದು ಸುಂಕ ಇಳಿಕೆಗೆ ಸರಕಾರದ ಮೇಲೆ ಒತ್ತಡ, ಟೆಸ್ಲಾಗೆ ಫೋಕ್ಸ್‌ವ್ಯಾಗನ್‌ ಬೆಂಬಲ

ಎಲೆಕ್ಟ್ರಿಕ್‌ ವಾಹನಗಳ ಆಮದು ಸುಂಕ ಇಳಿಕೆಗೆ ಸರಕಾರದ ಮೇಲೆ ಒತ್ತಡ, ಟೆಸ್ಲಾಗೆ ಫೋಕ್ಸ್‌ವ್ಯಾಗನ್‌ ಬೆಂಬಲ

ಹೈಲೈಟ್ಸ್‌:

  • ಎಲೆಕ್ಟ್ರಿಕ್‌ ವಾಹನಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡುವಂತೆ ಸರಕಾರದ ಮೇಲೆ ಹೆಚ್ಚುತ್ತಿದೆ ಒತ್ತಡ
  • ಇತ್ತೀಚೆಗೆ ಖ್ಯಾತ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾ ಈ ಸಂಬಂಧ ಸರಕಾರಕ್ಕೆ ಮನವಿ ಸಲ್ಲಿಸಿತ್ತು
  • ಇದಕ್ಕೀಗ ವಿಶ್ವದ ಎರಡನೇ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಫೋಕ್ಸ್‌ವ್ಯಾಗನ್‌ ಕೂಡ ಧ್ವನಿಗೂಡಿಸಿದೆ
  • ಆಮದು ಸುಂಕ ಶೇ. 25ರಷ್ಟು ಕಡಿತ ಮಾಡಿದರೆ ದೇಶೀಯ ಉತ್ಪಾದಕರಿಗೆ ಅಂಥಹ ದೊಡ್ಡ ಗಂಡಾತರವೇನೂ ಸಂಭವಿಸುವುದಿಲ್ಲ ಎಂದ ಕಂಪನಿ

ಹೊಸದಿಲ್ಲಿ: ಎಲೆಕ್ಟ್ರಿಕ್‌ ವಾಹನಗಳ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡುವಂತೆ ಸರಕಾರದ ಮೇಲೆ ಒತ್ತಡ ಹೆಚ್ಚುತ್ತಿದೆ. ಇತ್ತೀಚೆಗೆ ಖ್ಯಾತ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾ ಈ ಸಂಬಂಧ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಇದಕ್ಕೀಗ ವಿಶ್ವದ ಎರಡನೇ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಫೋಕ್ಸ್‌ವ್ಯಾಗನ್‌ ಎಜಿಯೂ ಧ್ವನಿಗೂಡಿಸಿದೆ.

ಸದ್ಯ ಎಲೆಕ್ಟ್ರಿಕ್‌ ಕಾರುಗಳ ಮೇಲೆ ಶೇ. 100ರಷ್ಟು ಆಮದು ಸುಂಕ ಇದೆ. ಇದರಲ್ಲಿ ಶೇ. 25ರಷ್ಟು ಕಡಿತ ಮಾಡಿದರೆ ದೇಶೀಯ ಉತ್ಪಾದಕರಿಗೆ ಅಂಥಹ ದೊಡ್ಡ ಗಂಡಾತರವೇನೂ ಸಂಭವಿಸುವುದಿಲ್ಲ. ಬದಲಿಗೆ ಹೂಡಿಕೆ ಸೆಳೆಯಲು ಸಹಾಯವಾಗಲಿದೆ ಎಂದು ಜರ್ಮನ್‌ ಮೂಲದ ಫೋಕ್ಸ್‌ವ್ಯಾಗನ್‌ ಭಾರತದ ಮುಖ್ಯಸ್ಥರು ರಾಯ್ಟರ್ಸ್‌ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

“ಹೂಡಿಕೆಗಳು ಬರಲು ಇವಿಗಳ ಮಾರುಕಟ್ಟೆಯು ಸಾಕಷ್ಟು ದೊಡ್ಡದಾಗಿರಬೇಕು ಮತ್ತು ಅದಕ್ಕಾಗಿ ನಾವು ಅಡೆತಡೆಗಳನ್ನು ಹಾಕಬಾರದು,” ಎಂದು ಸ್ಕೋಡಾ ಆಟೋ ಫೋಕ್ಸ್‌ವ್ಯಾಗನ್‌ ಇಂಡಿಯಾ ಮ್ಯಾನೇಜಿಂಗ್‌ ಡೈರೆಕ್ಟರ್‌ ಗುರ್‌ಪ್ರತಾಪ್‌ ಬೊಪರಾಯ್‌ ಹೇಳಿದ್ದಾರೆ.

ಭಾರತದಲ್ಲಿ ಟೆಸ್ಲಾ ಕಾರು ಬಿಡುಗಡೆಗೆ ‘ಆಮದು ಸುಂಕ’ ಅಡ್ಡಿ, ಎಲಾನ್‌ ಮಸ್ಕ್‌ ಆರೋಪ
ಆಡಿ, ಪೋರ್ಶೆ, ಲ್ಯಾಂಬೋರ್ಗಿನಿ ಸೇರಿ ಹಲವು ಖ್ಯಾತನಾಮ ಬ್ರ್ಯಾಂಡ್‌ಗಳನ್ನು ಫೋಕ್ಸ್‌ವ್ಯಾಗನ್‌ ಹೊಂದಿದ್ದು, ತನ್ನ ಫೋಕ್ಸ್‌ವ್ಯಾಗನ್‌ ಹಾಗೂ ಸ್ಕೋಡಾ ಬ್ರ್ಯಾಂಡ್‌ಗಳ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ. ಆದರೆ ಇಲ್ಲಿಯೂ ಕಂಪನಿಗೆ ಆಮದು ಸುಂಕ ಅಡ್ಡಿಯಾಗಿ ನಿಂತಿದೆ.

ಟೆಸ್ಲಾದ ಬೇಡಿಕೆ ಬಳಿಕ ಸರಕಾರವೂ ಈ ಬಗ್ಗೆ ಚಿಂತನೆ ನಡೆಸುತ್ತಿದ್ದು, ಆಮದು ಸುಂಕವನ್ನು ಶೇ. 40ಕ್ಕೆ ಇಳಿಸುವ ಬಗ್ಗೆಯೂ ಚರ್ಚೆ ನಡೆಸುತ್ತಿದೆ. ಆದರೆ ಅಂತಿಮ ತೀರ್ಮಾನಕ್ಕೆ ಇನ್ನೂ ಬಂದಿಲ್ಲ.

ಮರ್ಸೀಡೆಸ್‌ ಬೆನ್ಜ್‌, ಹುಂಡೈ ಕೂಡ ಇದೇ ಬೇಡಿಕೆ ಇಟ್ಟಿವೆ. ಆದರೆ ದೇಶೀಯ ಉತ್ಪಾದಕರಾದ ಟಾಟಾ ಮೋಟಾರ್ಸ್‌ ಮೊದಲಾದವರು ಇದನ್ನು ವಿರೋಧಿಸುತ್ತಿದ್ದಾರೆ. ಇದು ಸ್ಥಳೀಯ ಉತ್ಪಾದನೆಗೆ ಹೊಡೆತ ನೀಡಲಿದೆ ಎಂದು ಇವರುಗಳು ವಾದಿಸಿದ್ದಾರೆ.

ಆಮದು ಸುಂಕ ಕಡಿತ ಇಲ್ಲ ಎಂದ ಸರಕಾರ, ಟೆಸ್ಲಾಗೆ ಭಾರಿ ನಿರಾಸೆ
“ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸಬಾರದು ಎಂದು ನಾನು ಹೇಳುತ್ತಿಲ್ಲ. ಆದರೆ ಶೇ. 60 ಆಗೂ ಶೇ. 100ರಷ್ಟು ತೆರಿಗೆ ಈ ಸಂದರ್ಭದಲ್ಲಿ ತೀರಾ ಹೆಚ್ಚು,” ಎಂದು ಬೊಪರಾಯ್‌ ಹೇಳಿದ್ದಾರೆ.

ಫೋಕ್ಸ್‌ವ್ಯಾಗನ್‌ ಎಲೆಕಟ್ರಿಕ್‌ ಕಾರುಗಳ ಉತ್ಪಾದನೆಯಲ್ಲಿ ಟೆಸ್ಲಾವನ್ನು 2025ರೊಳಗೆ ಹಿಂದಿಕ್ಕಲು ನಿರ್ಧರಿಸಿದ್ದು, ಸಾವಿರಾರು ಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡುತ್ತಿದೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಡಿ ಎಲೆಕ್ಟ್ರಿಕ್‌ ಕಾರನ್ನು ಕಂಪನಿ ಮಾರಾಟ ಮಾಡಿತ್ತು. ಇದೀಗ ಐಷಾರಾಮಿ ಹಾಗೂ ದುಬಾರಿ ಪೋರ್ಶೆ ಟಯ್ಕಾನ್‌ ಎಲೆಕ್ಟ್ರಿಕ್‌ ಕಾರನ್ನು ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದೆ. ಅದಕ್ಕೂ ಮೊದಲು ಆಮದು ಸುಂಕ ಕಡಿತವನ್ನು ಕಂಪನಿ ಎದುರು ನೋಡುತ್ತಿದೆ.


Source link

x

Check Also

ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಹೈಲೈಟ್ಸ್‌: ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ ಪ್ರಕಟ ಮೊದಲ ಸ್ಥಾನದಲ್ಲೇ ಮುಂದಿವರಿದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಗೌತಮ್‌ ಅದಾನಿಗೆ ...