Home » Kannada News » ಐಪಿಎಲ್‌, ಟಿ20 ವಿಶ್ವಕಪ್ ಎಲ್ಲದರಿಂದಲೂ ಜೋಫ್ರ ಆರ್ಚರ್‌ ಔಟ್‌!

ಐಪಿಎಲ್‌, ಟಿ20 ವಿಶ್ವಕಪ್ ಎಲ್ಲದರಿಂದಲೂ ಜೋಫ್ರ ಆರ್ಚರ್‌ ಔಟ್‌!

ಹೈಲೈಟ್ಸ್‌:

  • ಭಾರತ ವಿರುದ್ಧದ ಟೆಸ್ಟ್‌ ಸರಣಿಯಿಂದಲೂ ಸಂಪೂರ್ಣವಾಗಿ ಹಿರಬಿದ್ದ ಆರ್ಚರ್‌.
  • ಮುಂಬರುವ ಐಪಿಎಲ್‌, ಟಿ20 ವಿಶ್ವಕಪ್ ಮತ್ತು ಆಷಸ್‌ ಟೆಸ್ಟ್ ಸರಣಿಯಿಂದಲೂ ಔಟ್.
  • ಮೊಣಕೈ ಗಾಯದ ಸಮಸ್ಯೆಯಿಂದ ಚೇತರಿಸಲು ವರ್ಷವಿಡೀ ಕ್ರಿಕೆಟ್‌ನಿಂದ ದೂರ.

ನಾಟಿಂಗ್‌ಹ್ಯಾಮ್‌: ಮೊಣಕೈ ಗಾಯದ ಸಮಸ್ಯೆಯಿಂದ ಸಂಪೂರ್ಣ ಚೇತರಿಸದ ಕಾರಣ ವೇಗದ ಬೌಲರ್‌ ಜೋಫ್ರ ಆರ್ಚರ್‌ ಇದೇ ವರ್ಷ ನಡೆಯಲಿರುವ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿ ಮತ್ತು ಆಷಸ್‌ ಟೆಸ್ಟ್‌ ಕ್ರಿಕೆಟ್ ಸರಣಿಯಿಂದಲೂ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿ (ಇಸಿಬಿ) ಗುರುವಾರ ತಿಳಿಸಿದೆ.

ಪದೇ ಪದೇ ಮೊಣಕೈ ನೋವಿನ ಸಮಸ್ಯೆಗೆ ತುತ್ತಾಗುತ್ತಿರುವ ಆರ್ಚರ್‌, ಈವರೆಗೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ಆದರೂ ಸಮಸ್ಯೆ ಸಂಪೂರ್ಣವಾಗಿ ಸುಧಾರಿಸದ ಕಾರಣ ಈ ವರ್ಷ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಇಸಿಬಿ ವಿವರಿಸಿದೆ. ಇದರೊಂದಿಗೆ ಸೆಪ್ಟೆಂಬರ್‌ನಲ್ಲಿ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದಲೂ ಬಲಗೈ ವೇಗಿ ಹೊರಬಿದಿದ್ದಾರೆ.

“ಜೋಫ್ರ ಸಂಪೂರ್ಣ ಚೇತರಿಸದ ಈ ವರ್ಷ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಭಾರತ ವಿರುದ್ಧದ ಟೆಸ್ಟ್‌ ಕ್ರಿಕೆಟ್ ಸರಣಿ, ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಆಷಸ್‌ ಸರಣಿಗೂ ಅಲಭ್ಯರಾಗಲಿದ್ದಾರೆ,” ಎಂದು ಇಸಿಬಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜೇಮ್ಸ್‌ ಆಂಡರ್ಸನ್ ಎದುರು ಕೊಹ್ಲಿ ಗೋಲ್ಡನ್ ಡಕ್!: ವಿಡಿಯೋ ವೈರಲ್

2019ರಲ್ಲಿ ಇಂಗ್ಲೆಂಡ್‌ ತಂಡ ತಾಯ್ನಾಡಿನಲ್ಲಿ ಆಸ್ಟ್ರೇಲಿಯಾ ಎದುರು ಆಷಸ್‌ ಟೆಸ್ಟ್‌ ಸರಣಿ ಗೆದ್ದಾಗ ಆರ್ಚರ್‌ ಬೌಲಿಂಗ್ ತಂಡದ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿತ್ತು. ಇದೀಗ ಆರ್ಚರ್‌ ಅಲಭ್ಯತೆ ಇಂಗ್ಲೆಂಡ್‌ ತಂಡಕ್ಕೆ ಮರ್ಮಾಘಾತ ನೀಡಿದಂತ್ತಾಗಿದೆ. ಈ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಬಳಿಕ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು 5 ಪಂದ್ಯಗಳ ಟೆಸ್ಟ್‌ ಸರಣಿಯನ್ನಾಡಲಿದೆ.

‘ಕೆಳಗೆ ಬಿದ್ದಾಗ ಸಹಾಯಕ್ಕೆ ಯಾರೂ ಬಂದಿರಲಿಲ್ಲ’ 2014ರ ಕಹಿ ಘಟನೆ ನೆನೆದ ಕೊಹ್ಲಿ!

2019-20ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಜೋಫ್ರ ಆರ್ಚರ್‌ ಮೊದಲ ಬಾರಿ ಮೊಣಕೈ ನೋವಿನ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಇದಕ್ಕೆ ಚುಚ್ಚುಮದ್ದು ಪಡೆಯುತ್ತಲೇ ಆಟ ಮುಂದುವರಿಸಿದ್ದ ಆರ್ಚರ್‌, ಇದೇ ವರ್ಷ ಭಾರತ ಪ್ರವಾಸದಲ್ಲಿ ಮತ್ತೆ ಗಂಭೀರ ಸಮಸ್ಯೆ ಎದುರಿಸಿದರು. ಬಳಿಕ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಕಮ್‌ಬ್ಯಾಕ್‌ ಮಾಡಿದರಾದರೂ, ನೋವು ಮರುಕಳಿಸಿದರಿಂದ 2ನೇ ಬಾರಿ ಶಸ್ತ್ರಚಿಕಿತ್ಸೆ ಪಡೆಯುವಂತ್ತಾಗಿತ್ತು.


Source link

x

Check Also

ಚಂಡಮಾರುತದ ರೌದ್ರ ರೂಪ ಕಂಡಾಗ.. ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 20

ಕಳೆದ ವಾರ ಮನುಷ್ಯನ ಮಾನಸಿಕ ಅಸ್ವಸ್ಥತೆಯಿಂದ ಆದ ವೈಪರೀತ್ಯ ನೋಡಿದ್ದೆವು. ಅವನಿಂದ ಗುಂಡುಗಳು ಹಾರಿದವು, ಸಿಕ್ಕಿಕೊಂಡ ಮೇಲೆ ವಿಚಾರಣೆಯಾಯ್ತು, ಇಂಜೆಕ್ಷನ್ ...