Home » Kannada News » ಕನ್ನಡ ಬಿಗ್ ಬಾಸ್ ಮಿನಿ ಸೀಸಸ್‌ಗೆ ಕಿಚ್ಚ ಸುದೀಪ್ ಎಂಟ್ರಿ; ನೆಚ್ಚಿನ ಟಿವಿ ತಾರೆಯರ ರಿಯಲ್ ಆಟವಿದು!

ಕನ್ನಡ ಬಿಗ್ ಬಾಸ್ ಮಿನಿ ಸೀಸಸ್‌ಗೆ ಕಿಚ್ಚ ಸುದೀಪ್ ಎಂಟ್ರಿ; ನೆಚ್ಚಿನ ಟಿವಿ ತಾರೆಯರ ರಿಯಲ್ ಆಟವಿದು!

ಹೈಲೈಟ್ಸ್‌:

  • ಬಿಗ್ ಬಾಸ್ ಮಿನಿ ಸೀಸನ್ ಆಗಸ್ಟ್ 14ರಿಂದ ಆರಂಭ
  • 14 ಟಿವಿ ತಾರೆಯರ ಬಿಗ್ ಬಾಸ್ ಮಿನಿ ಸೀಸನ್
  • ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಕೂಡ ಈ ಶೋನಲ್ಲಿ ಇರಲಿದ್ದಾರೆ
  • ನೆಚ್ಚಿನ ತಾರೆಯರು ನಿಜವಾದ ವ್ಯಕ್ತಿತ್ವದೊಂದಿಗೆ ಆಟ ಆಡಲಿದ್ದಾರೆ

ಜನ-ಮನ ಮೆಚ್ಚಿದ ನಟ-ನಟಿಯರನ್ನು ಒಳಗೊಂಡ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಮಿನಿ ಸೀಸನ್ ಶೋ ಆಗಸ್ಟ್ 14ರಿಂದ ಪ್ರಸಾರ ಆಗ್ತಿದೆ. ಈ ಶೋ ‘ಬಿಗ್ ಬಾಸ್ ಮಿನಿ ಸೀಸನ್‘ ಆಗಿದ್ದು ಕಲರ್ಸ್ ಕನ್ನಡದ ಧಾರಾವಾಹಿ ನಟ-ನಟಿಯರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಶನಿವಾರ-ಭಾನುವಾರ ಮಧ್ಯಾಹ್ನ 4 ಗಂಟೆಗೆ ಅದ್ದೂರಿಯಾಗಿ ಈ ಮಿನಿ ಸೀಸನ್ ಆರಂಭ ಆಗಲಿದೆ.

15 ದಿನಗಳ ಬಿಗ್ ಬಾಸ್ ಶೋ
ಒಟ್ಟು 15 ದಿನಗಳ ಕಾಲ ಬಿಗ್ ಬಾಸ್ ಪ್ರಸಾರ ಆಗಲಿದೆ. ಕಿಚ್ಚ ಸುದೀಪ್ ಅವರು ಶನಿವಾರ-ಭಾನುವಾರದ ಸಂಚಿಕೆಯ ನಿರೂಪಣೆ ಮಾಡಲಿದ್ದಾರೆ. ಈ ವಿಷಯ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ನೀಡಲಿದೆ. 14 ಟಿವಿ ತಾರೆಗಳು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಈ ಹಿಂದಿನ ಸೀಸನ್‌ಗಳಿಗಿಂತ ಬಿಗ್ ಬಾಸ್ ಮಿನಿ ಸೀಸನ್ ತುಂಬ ವಿಭಿನ್ನವಾಗಿ ಮೂಡಿ ಬರಲಿದೆ. ನಿತ್ಯ ರಾತ್ರಿ 10.30ಗೆ ಈ ಶೋ 1 ಗಂಟೆಗಳ ಕಾಲ ಪ್ರಸಾರ ಆಗಲಿದ್ದು, ಆಗಸ್ಟ್ 28ಕ್ಕೆ ಮುಕ್ತಾಯ ಆಗಲಿದೆ.

6 ದಿನಗಳ ಕನ್ನಡ ‘ಬಿಗ್ ಬಾಸ್ ಫ್ಯಾಮಿಲಿ’ಯಲ್ಲಿ ಭಾಗವಹಿಸುವ 15 ಸ್ಪರ್ಧಿಗಳ ವಿವರ ಹೀಗಿದೆ

ರಿಯಲ್ ವ್ಯಕ್ತಿತ್ವಗಳ ಆಟ
ಇಷ್ಟುದಿನಗಳ ಕಾಲ ನೆಚ್ಚಿನ ಧಾರಾವಾಹಿ ನಟ-ನಟಿಯರು ವೀಕ್ಷಕರಿಗೆ ಪಾತ್ರಗಳ ಮೂಲಕ ಪರಿಚಯ ಆಗಿದ್ದರು. ಆದರೆ ‘ಬಿಗ್ ಬಾಸ್ ಅವಾರ್ಡ್ಸ್’ ಮೂಲಕ ನಟ-ನಟಿಯರು ಅವರ ನಿಜವಾದ ಹೆಸರು, ವ್ಯಕ್ತಿತ್ವದ ಮೂಲಕ ಆಟ ಆಡಲಿದ್ದಾರೆ. ಇದು ಇನ್ನಷ್ಟು ರೋಚಕವಾಗಿರಲಿದೆ, ಬಿಗ್ ಬಾಸ್ ಪ್ರಿಯರಿಗೊಂದೇ ಅಲ್ಲದೆ ಧಾರಾವಾಹಿ ಪ್ರಿಯರಿಗೂ ಇಷ್ಟ ಆಗಲಿದೆ. ಈ ಹಿಂದಿನ ಸೀಸನ್‌ಗಳಲ್ಲಿ ಒಬ್ಬರು ಒಂದು ಸೀಸನ್‌ನ ವಿಜೇತರಾಗುತ್ತಿದ್ದರು. ಇಲ್ಲಿ ಪ್ರಶಸ್ತಿಗಳನ್ನು ವಿಭಿನ್ನವಾಗಿ ನೀಡಲಾಗುವುದು. ಯಾವ ರೀತಿಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುವುದು, ಏನೆಲ್ಲ ವಿಶೇಷತೆ ಇರಲಿದೆ? ಯಾವ ರೀತಿಯಲ್ಲಿ ಟಾಸ್ಕ್ ಇರಲಿದೆ? ಎಂಬ ಕುತೂಹಲ ಈಗಾಗಲೇ ಶುರುವಾಗಿದೆ.

ಬಿಗ್ ಬಾಸ್ ಮನೆಯಲ್ಲಿ ನಟ ಕಿರಣ್ ರಾಜ್, ಅಭಿನವ್ ವಿಶ್ವನಾಥನ್; ಲೀಕ್ ಆಗೋಯ್ತು ಫೋಟೋ!

7 ನಟ, 7 ನಟಿಯರು
ಸೋಶಿಯಲ್ ಮೀಡಿಯಾದಲ್ಲಿ ಧಾರಾವಾಹಿ ಕಲಾವಿದರಿಗೆ ಸಾಕಷ್ಟು ಫ್ಯಾನ್‌ ಪೇಜ್‌ಗಳು ಇರುತ್ತವೆ. ಅಂತೆಯೇ ಕಲಾವಿದರು ಬಿಗ್ ಬಾಸ್‌ ಮಿನಿ ಸೀಸನ್‌ನಲ್ಲಿ ಭಾಗವಹಿಸಿರುವುದರಿಂದ ನಿರೀಕ್ಷೆ ದುಪ್ಪಟ್ಟಿದೆ. ನಿರೂಪಕರಾದ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಅವರು ಈ ಶೋನ ಸಾರಥ್ಯ ವಹಿಸಲಿದ್ದಾರೆ. ಏಳು ನಟ, ಏಳು ನಟಿಯರು ಈ ಶೋನಲ್ಲಿ ಭಾಗವಹಿಸಲಿದ್ದಾರೆ. ಒಟ್ಟಿನಲ್ಲಿ ಎಲ್ಲರೂ ಕಲಾವಿದರಾಗಿರೋದರಿಂದ ನಿರೀಕ್ಷೆ ಜಾಸ್ತಿಯಿದೆ.

ಗಗನ್ ಚಿನ್ನಪ್ಪ, ನಯನಾ ನಾಗರಾಜ್, ಕಿರಣ್ ರಾಜ್, ಅಭಿನವ್ ವಿಶ್ವನಾಥನ್, ಚಂದನಾ ಅನಂತಕೃಷ್ಣ, ರಮೋಲಾ, ವೈಷ್ಣವಿ, ಭವ್ಯಾ ಗೌಡ, ಧನುಷ್, ಹೃತ್ವಿಕ್ ಮಠದ, ತ್ರಿವಿಕ್ರಮ್, ಪ್ರೇರಣಾ ಕಂಬಂ, ಯಶಸ್ವಿ ಮುಂತಾದವರು ಈ ಸೀಸನ್‌ನಲ್ಲಿ ಭಾಗವಹಿಸುತ್ತಿದ್ದಾರೆ.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...