Home » Kannada News » ಕೊರೊನಾ ನಿಯಂತ್ರಿಸಲು ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಚರ್ಚಿಸಿ ಅಗತ್ಯ ಕ್ರಮ: ಸಿಎಂ ಬೊಮ್ಮಾಯಿ

ಕೊರೊನಾ ನಿಯಂತ್ರಿಸಲು ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಚರ್ಚಿಸಿ ಅಗತ್ಯ ಕ್ರಮ: ಸಿಎಂ ಬೊಮ್ಮಾಯಿ

ಹೈಲೈಟ್ಸ್‌:

  • ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಸಂಜೆ ನಡೆಯಲಿದೆ ಮಹತ್ವದ ಸಭೆ
  • ತಜ್ಞರ ಸಲಹೆ ಪಡೆದು ವೈಜ್ಞಾನಿಕವಾಗಿ ಚರ್ಚಿಸಿ ಅಗತ್ಯ ಕ್ರಮ ಎಂದ ಸಿಎಂ
  • ಮತ್ತೆ ರಾಜ್ಯದಲ್ಲಿ ಸೆಮಿಲಾಕ್‌ಡೌನ್‌ ಆಗುತ್ತಾ? ಸಿಎಂ ಹೇಳಿದ್ದೇನು?

ಬೆಂಗಳೂರು: ಕೋವಿಡ್ ಒಂದನೇ, ಎರಡನೇ ಅಲೆಯ ಅನುಭವದಿಂದ ಈ ಬಾರಿ ಕೋವಿಡ್ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ಮಾಡಬೇಕೆಂಬ ಚಿಂತನೆ ಇದೆ. ಪ್ರಿವೆನ್ಷನ್ ಇಸ್ ಬೆಟರ್ ಎಂಬ ದೃಷ್ಟಿಯಿಂದ ಹಂತಹಂತವಾಗಿ ಸಂಪೂರ್ಣ ನಿಯಂತ್ರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ, ತಜ್ಞರ ಸಲಹೆ ಪಡೆದುಕೊಂಡು, ವೈಜ್ಞಾನಿಕವಾಗಿ ಚರ್ಚಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಜನರಿಗೆ, ಜನರ ಬದುಕಿಗೆ ತೊಂದರೆಯಾಗಬಾರದು, ಹಾಗೆಯೇ ಕೊರೊನಾ ಹರಡಬಾರದು ಎನ್ನುವುದೇ ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿಸಿದ್ದಾರೆ.

ಇನ್ನು 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ಸೌಭಾಗ್ಯ ಒದಗಿಬಂದಿದೆ. ಕನ್ನಡ ನಾಡು, ಸಾಹಿತ್ಯ, ಆಡಳಿತ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದೇಶದಲ್ಲೇ ಮಾದರಿಯಾಗಿದೆ. 75 ವರ್ಷ ನಡೆದು ಬಂದ ದಾರಿ, ಇನ್ನೂ ನಡೆಯಬೇಕಾದ ದಾರಿಯ ಬಗ್ಗೆ ಚಿಂತನೆ ಮಾಡಬೇಕಿದೆ. ನಮ್ಮ ಸರ್ಕಾರ ಕೂಡ ಅದೇ ದಿಕ್ಕಿನಲ್ಲಿ ಚಿಂತನೆ ಮಾಡುತ್ತಿದೆ. ಅಲ್ಲದೇ ಕೋವಿಡ್ ಮಾರ್ಗಸೂಚಿ ಪ್ರಕಾರ, ಅಂತರ ಕಾಪಾಡಿಕೊಂಡು ಸ್ವಾತಂತ್ರ್ಯ ದಿನ ಆಚರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

3ನೇ ಅಲೆ ತಡೆಗೆ ಇಂದು ಸಿಎಂ ನೇತೃತ್ವದ ಸಭೆ: ರಾಜ್ಯಾದ್ಯಂತ ವೀಕೆಂಡ್‌ ಕರ್ಫ್ಯೂ? ಭಾಗಶಃ ಲಾಕ್‌ಡೌನ್‌?

ಕೊರೊನಾ ಸಂಬಂಧ ಸಚಿವರುಗಳೊಂದಿಗೆ, ಪರಿಣಿತರೊಂದಿಗೆ ಸಿಎಂ ಬೊಮ್ಮಾಯಿ ಇಂದು ಸಂಜೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...