Home » Kannada News » ಗರ್ಲ್‌ಫ್ರೆಂಡ್‌ ನಿಕಿತಾಗೆ ಉಂಗುರ ತೊಡಿಸಿದ ಕರ್ನಾಟಕದ ಆಲ್‌ರೌಂಡರ್‌ ಶ್ರೇಯಸ್‌!

ಗರ್ಲ್‌ಫ್ರೆಂಡ್‌ ನಿಕಿತಾಗೆ ಉಂಗುರ ತೊಡಿಸಿದ ಕರ್ನಾಟಕದ ಆಲ್‌ರೌಂಡರ್‌ ಶ್ರೇಯಸ್‌!

ಹೈಲೈಟ್ಸ್‌:

  • ಟ್ವಿಟರ್‌ ಮೂಲಕ ಎಂಗೇಜ್ಮೆಂಟ್‌ ಸುದ್ದಿ ಹಂಚಿಕೊಂಡ ಶ್ರೇಯಸ್‌ ಗೋಪಾಲ್.
  • ವೈಯಕ್ತಿಕ ಜೀವನದಲ್ಲಿ ಹೊಸ ಇನಿಂಗ್ಸ್‌ಗೆ ಮುಂದಾದ ಕರ್ನಾಟಕದ ಆಲ್‌ರೌಂಡರ್.
  • ಗರ್ಲ್‌ಫ್ರೆಂಡ್ ನಿಕಿತಾಗೆ ಉಂಗುರ ತೊಡಿಸಿದ ಫೋಟೊ ಹಂಚಿಕೊಂಡ ಶ್ರೇಯಸ್.

ಬೆಂಗಳೂರು: ಕರ್ನಾಟಕದ ಸ್ಟಾರ್‌ ಆಲ್‌ರೌಂಡರ್‌ ಶ್ರೇಯಸ್‌ ಗೋಪಾಲ್‌ ಹಸೆಮಣೆ ಏರಲು ಸಜ್ಜಾಗಿದ್ದು, ದೀರ್ಘಕಾಲದ ಗೆಳತಿ ನಿಕಿತಾ ಅವರೊಟ್ಟಿಗೆ ಬುಧವಾರ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ತಮ್ಮ ಅಧಿಕೃತ ಟ್ವಿಟರ್‌ ಖಾತೆ ಮೂಲಕ ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

ಇದಕ್ಕೆ ಕೂಡಲೇ ಪ್ರತಿಕ್ರಿಯೆ ನೀಡಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ ಫ್ರಾಂಚೈಸಿ ರಾಜಸ್ಥಾನ್‌ ರಾಯಲ್ಸ್‌ ತನ್ನ ಆಟಗಾರನಿಗೆ ಶುಭಕೋರಿದೆ. “ಶೀ ಸೇಡ್‌ ಶ್ರೇ-ಯೆಸ್‌…! ನಿಕಿತಾ ಅವರಿಗೆ ಉಂಗುರ ತೊಡಿಸಿರುವ ಶ್ರೇಯಸ್‌ ಗೋಪಾಲ್‌ಗೆ ಶುಭಾಶಯಗಳು. #ರಾಯಲ್‌ಫ್ಯಾಮಿಲಿ,” ಎಂದು ರಾಜಸ್ಥಾನ್ ರಾಯಲ್ಸ್‌ ತಂಡ ಟ್ವೀಟ್‌ ಮಾಡಿದೆ.

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಶ್ರೇಯಸ್‌ ರಾಜಸ್ಥಾನ್‌ ರಾಯಲ್ಸ್‌ ತಂಡದ ಪರ ಆಡಿದ್ದರು. ಕೊರೊನಾ ವೈರಸ್‌ ಕಾರಣ ಟೂರ್ನಿ ಅರ್ಧಕ್ಕೆ ನಿಂತ ಬಳಿಕ ಅವರು ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ.

“ನೀನಿಲ್ಲದೆ ಈ ವರ್ಷಗಳು ಇದೇ ರೀತಿ ಇರುತ್ತಿರಲಿಲ್ಲ. ನಿನ್ನೊಟ್ಟಿಗೆ ಮುಂದಿನ ಹೆಜ್ಜೆ ಇಡಲು ಬಹಳಾ ಉತ್ಸುಕನಾಗಿದ್ದೇನೆ. ಹೊಸ ಜೀವನ ಆರಂಭಿಸಲು ಕಾತುರನಾಗಿದ್ದೇನೆ,” ಎಂದು ಶ್ರೇಯಸ್‌ ಗೋಪಾಲ್‌ ಟ್ವೀಟ್‌ ಮಾಡಿದ್ದಾರೆ.

ಶ್ರೇಯಸ್‌, ಇದೀಗ ಯುಎಇ ಆತಿಥ್ಯದಲ್ಲಿ ನಡೆಯಲಿರುವ ಐಪಿಎಲ್ 2021 ಟೂರ್ನಿಯ ಎರಡನೇ ಚರಣದಲ್ಲಿ ಪಾಲ್ಗೊಂಡು ರಾಜಸ್ಥಾನ್ ರಾಯಲ್ಸ್‌ ಪರ ಗಮನಾರ್ಹ ಪ್ರದರ್ಶನ ನೀಡಿ ಟೀಮ್ ಇಂಡಿಯಾ ಸೆಲೆಕ್ಟರ್ಸ್‌ ಗಮನ ಸೆಳೆಯುವ ಪ್ರಯತ್ನ ಮಾಡಲಿದ್ದಾರೆ. ಐಪಿಎಲ್ 2021 ಟೂರ್ನಿ ಸೆಪ್ಟೆಂಬರ್ 19ರಂದು ಶುರುವಾಗಲಿದ್ದು, ಟೂರ್ನಿಯಲ್ಲಿ ಬಾಕಿ ಉಳಿದಿರುವ 31 ಪಂದ್ಯಗಳಿಗೆ ದುಬೈ, ಶಾರ್ಜಾ ಮತ್ತು ಅಬುಧಾಬಿ ಕ್ರೀಡಾಂಗಣಗಳು ಆತಿಥ್ಯ ವಹಿಸಲಿವೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 64 ಪಂದ್ಯಗಳನ್ನು ಆಡಿರು ಶ್ರೇಯಸ್‌ ಗೋಪಾಲ್‌ 2674 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 11 ಶತಕ ಮತ್ತು 11 ಅರ್ಧಶತಕಗಳು ಸೇರಿವೆ. 191 ವಿಕೆಟ್‌ಗಳನ್ನು ಉರುಳಿಸಿರುವ ಅವರು 6 ಬಾರಿ ಐದು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.


Source link

x

Check Also

ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಹೈಲೈಟ್ಸ್‌: ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ ಪ್ರಕಟ ಮೊದಲ ಸ್ಥಾನದಲ್ಲೇ ಮುಂದಿವರಿದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಗೌತಮ್‌ ಅದಾನಿಗೆ ...