Home » Kannada News » ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನಗಳಿಗೆ ದಿನಪೂರ್ತಿ ಸಂಚಾರಕ್ಕೆ ಅವಕಾಶ

ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನಗಳಿಗೆ ದಿನಪೂರ್ತಿ ಸಂಚಾರಕ್ಕೆ ಅವಕಾಶ

ಹೈಲೈಟ್ಸ್‌:

  • ಚಾರ್ಮಾಡಿ ಘಾಟಿಯಲ್ಲಿ ಸಂಜೆ 7ರ ಬಳಿಕ ಬೆಳಗ್ಗೆ 6 ಗಂಟೆ ತನಕ ಹೇರಲಾಗಿದ್ದ ವಾಹನ ಸಂಚಾರ ನಿರ್ಬಂಧ ಸಡಿಲ
  • ಲಘು ವಾಹನಗಳಿಗೆ ದಿನಪೂರ್ತಿ ಸಂಚಾರಕ್ಕೆ ಅವಕಾಶ
  • ಜುಲೈ 23ರಂದು ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಪಾಯ ಎದುರಾಗಿತ್ತು
  • ಈ ಕಾರಣದಿಂದ ರಾತ್ರಿ ವಾಹನ ಸಂಚಾರಕ್ಕೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ನಿರ್ಬಂಧ ಹೇರಿದ್ದರು

ಮುಂಡಾಜೆ/ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಸಂಜೆ 7ರ ಬಳಿಕ ಬೆಳಗ್ಗೆ 6 ಗಂಟೆ ತನಕ ಹೇರಲಾಗಿದ್ದ ವಾಹನ ಸಂಚಾರ ನಿರ್ಬಂಧವನ್ನು ಸಡಿಲಗೊಳಿಸಿ, ಲಘು ವಾಹನಗಳಿಗೆ ದಿನಪೂರ್ತಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಜು.23ರಂದು ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಪಾಯ ಎದುರಾಗಿತ್ತು. ಈ ಕಾರಣದಿಂದ ರಾತ್ರಿ ವಾಹನ ಸಂಚಾರಕ್ಕೆ ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ನಿರ್ಬಂಧ ಹೇರುವ ಆದೇಶ ಹೊರಡಿಸಿದ್ದರು. ಇದರಿಂದ ಘಾಟಿ ಪ್ರದೇಶದಲ್ಲಿ ರಾತ್ರಿ ವಾಹನಗಳ ಸಂಚಾರ ಇರಲಿಲ್ಲ.

ಗುಡ್ಡ ಕುಸಿತ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ಇನ್ನಷ್ಟು ಕುಸಿತ ಉಂಟಾಗದಂತೆ ಮತ್ತು ಕುಸಿತಗೊಂಡ ಸ್ಥಳದಲ್ಲಿ ಮರಳಿನ ಚೀಲಗಳನ್ನು ಅಳವಡಿಸಿ ಹೆಚ್ಚಿನ ಹಾನಿ ಉಂಟಾಗದಂತೆ ತಕ್ಷಣ ಕಾಮಗಾರಿ ನೆರವೇರಿಸಲಾಗಿತ್ತು. ಆದರೆ ಘಾಟಿ ಪ್ರದೇಶದಲ್ಲಿ ವಿಪರೀತ ಮಳೆಯಿದ್ದ ಕಾರಣ ನಿರ್ಬಂಧ ಮುಂದುವರಿದಿತ್ತು.

ಚಾರ್ಮಾಡಿ ಘಾಟಿಯಲ್ಲಿ ಇನ್ನೂ ಆರಂಭವಾಗದ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ
ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆ.12ರಂದು ನೂತನ ಆದೇಶ ಹೊರಡಿಸಿದ್ದು ಟೆಂಪೋ ಟ್ರಾವೆಲರ್‌, ಆಂಬುಲೆನ್ಸ್‌, ಕಾರು, ಜೀಪು, ಮಿನಿವ್ಯಾನ್‌ ಹಾಗೂ ಇನ್ನಿತರ ಲಘು ವಾಹನಗಳು ಘಾಟಿಯಲ್ಲಿ ದಿನಪೂರ್ತಿ ಸಂಚರಿಸಲು ಅವಕಾಶ ನೀಡಿದ್ದಾರೆ. ಆದರೆ ಘನ ವಾಹನಗಳಾದ ಕೆಂಪು ಬಸ್‌, ಆರು ಚಕ್ರದ ಲಾರಿಗಳಿಗೆ ಬೆಳಗ್ಗೆ 6 ರಿಂದ ಸಂಜೆ 7 ಗಂಟೆ ತನಕ ಮಾತ್ರ ಸಂಚಾರ ಅವಕಾಶ ಇರುತ್ತದೆ.

ಬೃಹತ್‌ ವಾಹನಗಳಿಗೆ ನಿರ್ಬಂಧ ಮುಂದುವರಿಕೆ

ಬುಲೆಟ್‌ ಟ್ಯಾಂಕರ್ಸ್, ಫಿಶ್‌ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್‌ ಚಾರ್ಸಿಸ್‌ ವಾಹನಗಳು, ಹೆವಿ ಕಮರ್ಷಿಯಲ್‌ ವಾಹನಗಳು, ಮಲ್ಟಿ ಎಕ್ಸೆಲ್‌, ಟ್ರಕ್‌ ಟ್ರೈಲರ್‌, ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ಗಳು ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಣೆ ಹಾಗೂ ಪ್ರಯಾಣಿಕ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ. ಮುಂದಿನ ಆದೇಶದವರೆಗೆ ಈ ನಿಯಮ ಜಾರಿಯಲ್ಲಿರಲಿದೆ ಎಂದು ಡಿಸಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...