Home » Kannada News » ಜಮೀರ್‌ ಅಹ್ಮದ್‌ ನಿವಾಸದ ಮೇಲೆ ಇಡಿ ದಾಳಿ: ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್‌ ಹೇಳಿದ್ದೇನು?

ಜಮೀರ್‌ ಅಹ್ಮದ್‌ ನಿವಾಸದ ಮೇಲೆ ಇಡಿ ದಾಳಿ: ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್‌ ಹೇಳಿದ್ದೇನು?

ಹೈಲೈಟ್ಸ್‌:

  • ಜಮೀರ್‌ ಅಹ್ಮದ್‌ ಮೇಲೆ ಇಡಿ ದಾಳಿ ಕಾಂಗ್ರೆಸ್‌ ಖಂಡನೆ
  • ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್‌ ಹೇಳಿದ್ದೇನು?
  • ಬಿಜೆಪಿಗೊಂದು ನ್ಯಾಯ, ಕ್ರಾಂಗ್ರೆಸ್‌ಗೊಂದು ನ್ಯಾಯ?

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಎಎಂ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 45ಕ್ಕೂ ಹೆಚ್ಚು ಅಧಿಕಾರಿಗಳು ಜಮೀರ್‌ ನಿವಾಸದ ಮೇಲೆ ದಾಳಿ ನಡೆಸಿ ವಿವಿಧ ದಾಖಲೆ ಪತ್ರಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಜಮೀರ್‌ ಅಹ್ಮದ್‌ ಅವರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ವಾಗ್ಧಾಳಿ ನಡೆಸಿದ್ದಾರೆ.

ದೆಹಲಿ: ಕಾನೂನು ಹೋರಾಟ ಮಾಡಲು ಜಮೀರ್ ಸಮರ್ಥರಿದ್ದಾರೆ. ಇಡಿ ವಿಚಾರಣೆಗೆ ಸಹಕಾರ ನೀಡಿದ್ದಾಗಿ ಜಮೀರ್ ಹೇಳಿದ್ದಾರೆ. ಈ ಸಮಯದಲ್ಲಿ ಇಡಿ ದಾಳಿ ಅಗತ್ಯವಿಲ್ಲ. ಇಡಿ ದಾಳಿಯಿಂದ ಜಮೀರ್ಗೆ ಕಿರುಕುಳವಾಗುತ್ತಿದೆ. ಈ ಹಿಂದೆ ನೀಡಿದ್ದ ಹೇಳಿಕೆ ಆಧರಿಸಿ ದಾಳಿ ಸರಿಯಾದದ್ದಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು. ಇನ್ನು ಶ್ರೀನಿವಾಸಗೌಡರು ಸದನದಲ್ಲಿಯೇ 30 ಕೋಟಿ ಆಫರ್ ಕೊಟ್ಟು 5 ಕೋಟಿ ಮನೆಯಲ್ಲಿಟ್ಟಿದ್ದರು ಎಂದು ಹೇಳಿಕೆ ನೀಡಿದ್ದರು.

ತಮ್ಮ ಮನೆಯಲ್ಲಿ 5 ಕೋಟಿ ರೂ. ಇಟ್ಟಿದ್ದರೆಂದು ಬಹಿರಂಗವಾಗೇ ಹೇಳಿದ್ದರು. ಆಗ ಐಟಿ, ಇಡಿ ಎಲ್ಲಿ ಹೋಗಿತ್ತು ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಕೆಲಸ ಮಾಡಬಾರದು. ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು ನ್ಯಾಯ ಮಾಡಬಾರದು. ಬಿಜೆಪಿಯವರು ಬಹಳ ಪಾವಿತ್ರ್ಯವಾಗಿ ಇದ್ದಾರಾ. ಐಟಿ, ಇಡಿ ದಾಳಿಗಳಲ್ಲಿ ಬಹಳ ತಾರತಮ್ಯವಾಗುತ್ತಿದೆ. ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ಈ ಹಿಂದೆಯೇ ಅಧಿಕಾರಿಗಳ ವಿಚಾರಣೆಗೆ ಸಹಕಾರ ಕೊಟ್ಟಿದ್ದಾರೆ. ವ್ಯವಹಾರದ ಬಗ್ಗೆ ಎಲ್ಲ ಮಾಹಿತಿಯನ್ನು ಕೂಡ ಕೊಟ್ಟಿದ್ದಾರೆ. ಇದೆಲ್ಲಾ ಮುಗಿದುಹೋಗಿ ಸುಮಾರು ದಿನ ಕಳೆಯಿತು. ಆದರೆ ಈಗ ಏಕೆ ಇಡಿ ದಾಳಿ ಮಾಡುತ್ತಿದೆ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ರೋಷನ್ ಬೇಗ್ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗಲ್ಲ. ಒಂದು ಸಮುದಾಯ ಕೇಂದ್ರೀಕರಿಸಿ ದಾಳಿ ಮಾಡಲಾಗುತ್ತಿದೆ ಎಂದು ಇದೆ ವೇಳೆ ಡಿಕೆಶಿ ಆರೋಪಿಸಿದರು.

ಜಮೀರ್‌ಗೆ ಮುಳುವಾಯ್ತ ಅರಮನೆಯಂತಹ ನಿವಾಸ? ಕೋಟಿ ಖರ್ಚಿನ ಮಗಳ ಮದುವೆ?: ಐಟಿ ದಾಳಿಗೆ ಕಾರಣವೇನು?

ಜಮೀರ್‌ ಮನೆ ಮುಂದೆ ಜಮಾಯಿಸಿದ ಬೆಂಬಲಿಗರು!
ಇನ್ನೊಂದೆಡೆ, ಜಮೀರ್‌ ಅಹ್ಮದ್‌ ಅವರ ಕಂಟೋನ್ಮೆಂಟ್‌ ರೈಲು ನಿಲ್ದಾಣ ಬಳಿಯಿರುವ ಐಶಾರಾಮಿ ಮನೆ ಬಳಿಗೆ ಅವರ ಬೆಂಬಲಿಗರು ಆಗಮಿಸುತ್ತಿದ್ದಾರೆ. ಒಬ್ಬೊಬ್ಬರೇ ಆಗಮಿಸಿ ಮನೆ ಮುಂದೆ ಜಮಾಯಿಸುತ್ತಿದ್ದಾರೆ. ಇನ್ನು ಕೆಲ ಕಾಂಗ್ರೆಸ್‌ನ ನಾಯಕರು, ಇಡಿ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, ಏನು ಹೇಳಿದ್ದಾರೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ


Source link

x

Check Also

ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಹೈಲೈಟ್ಸ್‌: ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ ಪ್ರಕಟ ಮೊದಲ ಸ್ಥಾನದಲ್ಲೇ ಮುಂದಿವರಿದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಗೌತಮ್‌ ಅದಾನಿಗೆ ...