Home » Kannada News » ತಾಲಿಬಾನ್‌ ಹೆಸರಲ್ಲಿ ಅಪ್ಘಾನಿಸ್ತಾನಕ್ಕೆ ಐಸಿಸ್‌, ಲಷ್ಕರ್‌, ಜೈಷೆ ಉಗ್ರರ ಪ್ರವೇಶ

ತಾಲಿಬಾನ್‌ ಹೆಸರಲ್ಲಿ ಅಪ್ಘಾನಿಸ್ತಾನಕ್ಕೆ ಐಸಿಸ್‌, ಲಷ್ಕರ್‌, ಜೈಷೆ ಉಗ್ರರ ಪ್ರವೇಶ

ಹೈಲೈಟ್ಸ್‌:

  • ತಾಲಿಬಾನ್‌ ಹೆಸರಲ್ಲಿ ಅಪ್ಘಾನಿಸ್ತಾನಕ್ಕೆ ಐಸಿಸ್‌, ಲಷ್ಕರ್‌, ಜೈಷೆ ಉಗ್ರರ ಪ್ರವೇಶ
  • ಅಮೆರಿಕ – ತಾಲಿಬಾನ್‌ ಒಪ್ಪಂದದಂತೆ ಭಯೋತ್ಪಾದನೆ ಚಟುವಟಿಕೆಗಳಿಗೆ ಅವಕಾಶವಿಲ್ಲ
  • ಉಗ್ರರು ಕಂಡುಬಂದಲ್ಲಿ ಕೆಲವೇ ದಿನಗಳಲ್ಲಿ ಅಂಥವರನ್ನು ಗಡಿಪಾರು ಮಾಡಬೇಕಿದೆ

ಕಾಬೂಲ್‌: ಅಪ್ಘಾನಿಸ್ತಾನದಲ್ಲಿನ ರಾಜಕೀಯ ಸಂಘರ್ಷದ ಲಾಭ ಪಡೆದು ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳಾದ ಜೈಷೆ ಮೊಹಮ್ಮದ್‌, ಲಷ್ಕರೆ ತೊಯ್ಬಾ ಮತ್ತು ಸಿರಿಯಾ ತೊರೆದು ಆಶ್ರಯಕ್ಕಾಗಿ ಹಾತೊರೆಯುತ್ತಿರುವ ಐಸಿಸ್‌ ಉಗ್ರರ ದೊಡ್ಡ ಗುಂಪುಗಳು ಈಗಾಗಲೇ ಕಾಬೂಲ್‌ಗೆ ಪ್ರವೇಶಿಸಿದೆ. ತಾಲಿಬಾನ್‌ ಧ್ವಜ ಹಿಡಿದು ಪಾಕಿಸ್ತಾನ ಗಡಿ ಮೂಲಕ ಅಪ್ಘಾನಿಸ್ತಾನಕ್ಕೆ ನುಸುಳಿರುವ ಈ ವಿದೇಶಿ ಉಗ್ರರು, ಮುಂಬರುವ ಹೊಸ ಆಡಳಿತಕ್ಕೆ ದೊಡ್ಡ ತಲೆನೋವಾಗಲಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಆತಂಕ ವ್ಯಕ್ತಪಡಿಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ತಾಲಿಬಾನ್‌ ಸಂಘಟನೆಯು ಹಿಡಿತ ಸಾಧಿಸಿರದ ಕೆಲವು ಪ್ರದೇಶಗಳಲ್ಲಿ ನಿಧಾನವಾಗಿ ಐಸಿಸ್‌, ಲಷ್ಕರ್‌ ಉಗ್ರರು ಅಧಿಪತ್ಯ ಸಾಧಿಸುತ್ತಿದ್ದಾರೆ. ಆದರೆ, ಅಮೆರಿಕ ಜತೆಗಿನ ತಾಲಿಬಾನ್‌ ಒಪ್ಪಂದದಂತೆ ಅಪ್ಘಾನಿಸ್ತಾನದಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಅವಕಾಶ ನೀಡುವಂತಿಲ್ಲ. ಹಾಗೇನಾದರೂ ಕಂಡುಬಂದಲ್ಲಿ ಕೆಲವೇ ದಿನಗಳಲ್ಲಿ ಅಂಥ ಉಗ್ರರನ್ನು ಗಡಿಪಾರು ಮಾಡಬೇಕಿದೆ. ಹೀಗಾಗಿ ಇಂಥ ಕಾರ್ಯಕ್ಕೆ ತಾಲಿಬಾನಿಗಳು ಕೈಹಾಕಿದಾಗ ಐಸಿಸ್‌, ಲಷ್ಕರ್‌, ಜೈಷೆ ಉಗ್ರರು ಪ್ರತಿರೋಧ ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಆಂತರಿಕ ಸಮರಕ್ಕೆ ನಾಂದಿ ಆಗಲಿದೆ ಎನ್ನುವ ಕಾರ್ಮೋಡವೂ ಆಫ್ಘನ್‌ ನೆಲವನ್ನು ಆವರಿಸಿದೆ.

ಅವಕಾಶ ನೀಡದಂತೆ ಎಚ್ಚರಿಕೆ
ವಿದೇಶಿ ಉಗ್ರರ ಅಧಿಪತ್ಯ ಸಾಧನೆಗೆ ಬಿಡದಂತೆ ತಾಲಿಬಾನ್‌ ಕೂಡ ತನ್ನ ವಿದೇಶಿ ಕಾರ್ಯಾಚರಣೆ ಮುಖ್ಯಸ್ಥರನ್ನು ಕಾಬೂಲ್‌ಗೆ ಕರೆಸಿಕೊಳ್ಳುತ್ತಿದೆ. ವಿವಿಧ ಪ್ರಾಂತ್ಯಗಳ ಹೊಣೆಯನ್ನು ಅವರಿಗೆ ವಹಿಸುತ್ತಿದೆ. ಕ್ವೆಟ್ಟಾದಲ್ಲಿ ತಾಲಿಬಾನ್‌ ಸಂಸ್ಥಾಪಕ ಮುಲ್ಲಾ ಓಮರ್‌ನ ಪುತ್ರ ಯಾಕೂಬ್‌ನನ್ನು ಕಾಬೂಲ್‌ಗೆ ಕರೆಸಿಕೊಳ್ಳಲಾಗಿದೆ. ಆತನಿಗೆ ವಿದೇಶಿ ಉಗ್ರರ ತೆರವು ಕಾರ್ಯ ವಹಿಸಲಾಗುವ ಸಾಧ್ಯತೆಯಿದೆ. ಇದರ ಜತೆಗೆ ಆಫ್ಘನ್‌ ಮಾಜಿ ಅಧ್ಯಕ್ಷ ಹಮೀದ್‌ ಕರ್ಜಾಯಿ, ತಾಜಿಕ್‌ ನಾಯಕ ಅಬ್ದುಲ್ಲಾ ಅಬ್ದುಲ್ಲಾ ಸೇರಿ ಹಲವು ರಾಜಕೀಯ ಮುಖಂಡರಿಗೆ ಮುಂದಿನ ಸರಕಾರ ರಚನೆಗೆ ಅಗತ್ಯ ನೆರವು ನೀಡುವಂತೆಯೂ ತಾಲಿಬಾನ್‌ ಕಮಾಂಡರ್‌ಗಳು ಆದೇಶಿಸಿದ್ದಾರೆ. ಸರಕಾರ ರಚನೆ ಜತೆಗೆ ವಿದೇಶಿ ಉಗ್ರರ ಮಟ್ಟಹಾಕುವುದು ತಾಲಿಬಾನ್‌ಗೆ ಇರುವ ದೊಡ್ಡ ಸವಾಲು.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ: 90 ದಿನದೊಳಗೆ ರಾಜಧಾನಿ ಕಾಬೂಲ್‌ ಕೂಡ ಉಗ್ರರ ಹಿಡಿತಕ್ಕೆ?
ಕಾಶ್ಮೀರ ಕುರಿತು ತಲೆಹಾಕಲ್ಲ
ಕಾಶ್ಮೀರ ವಿಚಾರವು ಭಾರತ-ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಹಾಗೂ ಭಾರತದ ಆಂತರಿಕ ವಿಷಯವಾಗಿದೆ. ಈ ಸಂಬಂಧ ನಾವು ತಲೆಹಾಕಲ್ಲ ಎಂದು ತಾಲಿಬಾನ್‌ ಸ್ಪಷ್ಟಪಡಿಸಿದೆ. ಈ ಬಗ್ಗೆ ತಾಲಿಬಾನ್‌ ಕಮಾಂಡರ್‌ ಒಬ್ಬರು ತಿಳಿಸಿದ್ದಾಗಿ ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. ಮತ್ತೊಂದೆಡೆ, ಉಗ್ರ ನಿಗ್ರಹಕ್ಕಾಗಿ ಕಾಶ್ಮೀರ ಕಣಿವೆಯಲ್ಲಿ ಭಾರತೀಯ ಭದ್ರತಾ ಪಡೆಗಳು ಹೆಚ್ಚಿನ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆ ಅಪ್ಘಾನಿಸ್ತಾನವೇ ಪಾಕ್‌ ಉಗ್ರರಿಗೆ ಸುರಕ್ಷಿತ ತಾಣವಾಗಿದೆ ಎಂಬ ಭಾವನೆ ಇದೆ ಎಂದು ಕೂಡ ವರದಿಯಾಗಿದೆ.

ತಾಲಿಬಾನ್‌ ವಿರುದ್ಧ ಅಫ್ಘಾನ್‌ ಸೇನೆ ಸೋತಿದ್ದು ಯಾಕೆ?: ಲೆಕ್ಕಕ್ಕೆ ಇದ್ದು, ಆಟಕ್ಕಿಲ್ಲದ ಅಫ್ಘಾನ್‌ ಯೋಧರು!


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...