Home » Kannada News » ಪ್ರಯಾಣಿಕರ ವಾಹನ ಮಾರಾಟ ಜುಲೈನಲ್ಲಿ 2.64 ಲಕ್ಷಕ್ಕೆ ಏರಿಕೆ: ಸಿಯಾಮ್‌ ವರದಿ

ಪ್ರಯಾಣಿಕರ ವಾಹನ ಮಾರಾಟ ಜುಲೈನಲ್ಲಿ 2.64 ಲಕ್ಷಕ್ಕೆ ಏರಿಕೆ: ಸಿಯಾಮ್‌ ವರದಿ

ಹೈಲೈಟ್ಸ್‌:

  • ಪ್ರಯಾಣಿಕರ ವಾಹನ ಮಾರಾಟ ಜುಲೈನಲ್ಲಿ2.64 ಲಕ್ಷಕ್ಕೆ ಏರಿಕೆ
  • ಕಳೆದ ವರ್ಷ ಜುಲೈನಲ್ಲಿ1.82 ಲಕ್ಷ ವಾಹನ ಮಾರಾಟವಾಗಿತ್ತು
  • ಆಟೊಮೊಬೈಲ್‌ ಉತ್ಪಾದಕರ ಪ್ರಾತಿನಿಧಿಕ ಸಂಸ್ಥೆ ಸಿಯಾಮ್‌ನ ವರದಿ

ಹೊಸದಿಲ್ಲಿ: ಪ್ರಯಾಣಿಕರ ವಾಹನ ಮಾರಾಟ ಜುಲೈನಲ್ಲಿ2.64 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಆಟೊಮೊಬೈಲ್‌ ಉತ್ಪಾದಕರ ಪ್ರಾತಿನಿಧಿಕ ಸಂಸ್ಥೆ ಸಿಯಾಮ್‌ನ ವರದಿ ತಿಳಿಸಿದೆ. ಕಳೆದ ವರ್ಷ ಜುಲೈನಲ್ಲಿ 1.82 ಲಕ್ಷ ವಾಹನ ಮಾರಾಟವಾಗಿತ್ತು.

ಹೊಸ ಕಾರುಗಳು 2021ರ ಜುಲೈನಲ್ಲಿ 1.3 ಲಕ್ಷ ಹಾಗೂ 2020ರ ಜುಲೈನಲ್ಲಿ 1.02 ಲಕ್ಷ ಮಾರಾಟವಾಗಿವೆ. 1.24 ಲಕ್ಷ ಯುಟಿಲಿಟಿ ವಾಹನಗಳು ವಿಕ್ರಯವಾಗಿವೆ ಎಂದು ತಿಳಿಸಿದೆ. 2021ರ ಜುಲೈನಲ್ಲಿ ಒಟ್ಟು 17,888 ತ್ರಿಚಕ್ರ ವಾಹನಗಳು ಮಾರಾಟವಾಗಿವೆ. 12.53 ಲಕ್ಷ ದ್ವಿಚಕ್ರ ವಾಹನಗಳು ಮಾರಾಟವಾಗಿವೆ.

ವಾಹನಗಳ ಮಾರಾಟ ಏರಿಕೆ, ಕೃಷಿ ಸಲಕರಣೆ ವಲಯದಲ್ಲಿ 25% ಹೆಚ್ಚಳ

2020ರ ಜುಲೈನಲ್ಲಿ 12.81 ಲಕ್ಷ ದ್ವಿಚಕ್ರವಾಹನ ಮಾರಾಟವಾಗಿತ್ತು. ಕಳೆದ ಏಪ್ರಿಲ್‌-ಜುಲೈ ಅವಧಿಯಲ್ಲಿ ಒಟ್ಟು 36.57 ಲಕ್ಷ ದ್ವಿಚಕ್ರವಾಹನಗಳು ಮಾರಾಟವಾಗಿದೆ.

ಕಚ್ಚಾ ಸಾಮಾಗ್ರಿಗಳು ಮತ್ತು ಸೆಮಿಕಂಡಕ್ಟರ್‌ಗಳ ಕೊರತೆಯಿಂದ ಆಟೊಮೊಬೈಲ್‌ ಉತ್ಪಾದನೆಗೆ ಸಮಸ್ಯೆಯಾಗಿದೆ ಎಂದು ಸಿಯಾಮ್‌ ನ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ತಿಳಿಸಿದರು.


Source link

x

Check Also

ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಹೈಲೈಟ್ಸ್‌: ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ ಪ್ರಕಟ ಮೊದಲ ಸ್ಥಾನದಲ್ಲೇ ಮುಂದಿವರಿದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ ಗೌತಮ್‌ ಅದಾನಿಗೆ ...