Home » Kannada News » ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ: ಮೊದಲ ಸ್ಥಾನದಲ್ಲೇ ಮುಂದುವರಿದ ಮುಕೇಶ್‌ ಅಂಬಾನಿ

ಹೈಲೈಟ್ಸ್‌:

 • ಫೋರ್ಬ್ಸ್‌ 100 ಶ್ರೀಮಂತರ ಪಟ್ಟಿ ಪ್ರಕಟ
 • ಮೊದಲ ಸ್ಥಾನದಲ್ಲೇ ಮುಂದಿವರಿದ ರಿಲಯನ್ಸ್‌ ಅಧ್ಯಕ್ಷ ಮುಕೇಶ್‌ ಅಂಬಾನಿ
 • ಗೌತಮ್‌ ಅದಾನಿಗೆ ಎರಡನೇ ಸ್ಥಾನ

ಹೊಸದಿಲ್ಲಿ: ಫೋರ್ಬ್ಸ್‌ ಮ್ಯಾಗಜೀನ್ ದೇಶದ ಟಾಪ್‌ 100 ಶ್ರೀಮಂತರ ಪಟ್ಟಿ ಪ್ರಕಟಿಸಿದ್ದು, ರಿಲಯನ್ಸ್‌ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಂತರಾಗಿಯೇ ಮುಂದುವರಿದಿದ್ದಾರೆ. ಈ ವರ್ಷದಲ್ಲಿ ಮುಕೇಶ್‌ ಅಂಬಾನಿ ಸಂಪತ್ತಿಗೆ 4 ಬಿಲಿಯನ್‌ ಡಾಲರ್‌ನಷ್ಟು ಸೇರ್ಪಡೆಯಾಗಿದ್ದು, ಇವರ ಒಟ್ಟು ಆಸ್ತಿ 92.7 ಬಿಲಿಯನ್‌ ಡಾಲರ್‌ನಷ್ಟಿದೆ.

ಗೌತಮ್‌ ಅದಾನಿ ಎರಡನೇ ಸ್ಥಾನದಲ್ಲಿದ್ದು, ಇವರು ಮುಕೇಶ್‌ ಅಂಬಾನಿಗೆ ಸಮೀಪದಲ್ಲೇ ಇದ್ದಾರೆ. ಇವರ ಆಸ್ತಿ ಮೌಲ್ಯ 74.8 ಬಿಲಿಯನ್‌ ಡಾಲರ್‌ನಷ್ಟಿದ್ದು, ಮುಕೇಶ್‌ ಅಂಬಾನಿಂಗಿಂತ 17.9 ಬಿಲಿಯನ್‌ನಷ್ಟು ಕಡಿಮೆ ಇದೆ.

ಎಚ್‌ಸಿಎಲ್‌ ಟೆಕ್ನಾಲಜೀಸ್‌ ಸ್ಥಾಪಕ ಶಿವ ನಾಡರ್‌ ಮೂರನೇ ಸ್ಥಾನದಲ್ಲಿದ್ದಾರೆ. ಜಿಂದಾಲ್‌ ಗ್ರೂಪ್‌ನ ಸಾವಿತ್ರಿ ಜಿಂದಾಲ್‌ ಟಾಪ್‌-10 ಶ್ರೀಮಂತರ ಕ್ಲಬ್‌ಗೆ ಸೇರ್ಪಡೆಯಾಗಿದ್ದಾರೆ.

ಭಾರತದ ಟಾಪ್‌-10 ಸಿರಿವಂತರಿವರು: ಇವರ ದಿನದ ಸಂಪಾದನೆ ಕೇಳಿದ್ರೆ ಅಚ್ಚರಿ ಖಚಿತ!

ಕೊವಿಡ್ 2ನೇ ಅಲೆಯಿಂದ ಭಾರತ ಚೇತರಿಸಿಕೊಂಡಿದ್ದು, ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಮರುಸ್ಥಾಪಿಸಿದೆ. ಷೇರು ಮಾರುಕಟ್ಟೆ ಸೂಚ್ಯಂದಲ್ಲೂ ಭಾರೀ ಏರಿಕೆಯಾಗಿದ್ದು, ಇದೇ ಮೊದಲ ಬಾರಿಗೆ 60 ಸಾವಿರ ದಾಟಿದೆ.

2021ರ ಫೋರ್ಬ್ಸ್ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿನ ಸದಸ್ಯರ ಒಟ್ಟು ಸಂಪತ್ತನ್ನು ದಾಖಲೆಯ 775 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಟಾಪ್‌ 100 ಶ್ರೀಮಂತರ ಸಂಪೂರ್ಣ ಪಟ್ಟಿಯು www.forbes.com/india ಮತ್ತು www.forbesindia.comನಲ್ಲಿ ಲಭ್ಯವಿದೆ. ಫೋರ್ಬ್ಸ್ ಏಷ್ಯಾದ ಅಕ್ಟೋಬರ್ ಸಂಚಿಕೆ ಮತ್ತು ಫೋರ್ಬ್ಸ್ ಇಂಡಿಯಾ ನವೆಂಬರ್ ಸಂಚಿಕೆಯಲ್ಲಿ ಕೂಡ ಈ ಪಟ್ಟಿಯನ್ನು ಕಾಣಬಹುದು.

ಗೌತಮ್‌ ಅದಾನಿ ದಿನ ಗಳಿಕೆ 1002 ಕೋಟಿ ರೂ., ಏಷ್ಯಾದ 2ನೇ ಅತಿ ದೊಡ್ಡ ಕುಬೇರ

ಈ ಬಂಪರ್ ವರ್ಷದಲ್ಲಿ, ಪಟ್ಟಿಯಲ್ಲಿ ಇರುವ ಶೇ 80ಕ್ಕಿಂತ ಹೆಚ್ಚು ಮಂದಿ ತಮ್ಮ ಸಂಪತ್ತು ಹೆಚ್ಚಿಸಿಕೊಂಡಿದ್ದಾರೆ. 61 ಮಂದಿ 1 ಬಿಲಿಯನ್ ಯುಎಸ್ಡಿ ಅಥವಾ ಹೆಚ್ಚಿನ ಮೊತ್ತವನ್ನು ಸೇರಿಸಿದ್ದಾರೆ. ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮುಕೇಶ್ ಅಂಬಾನಿ, 2008ರಿಂದ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೇ ಉಳಿದಿದ್ದು, ಅವರ ನಿವ್ವಳ ಮೌಲ್ಯ 92.7 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಅಂಬಾನಿ ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ನಿಂದ 10 ಬಿಲಿಯನ್ ಹೂಡಿಕೆಯನ್ನು ನವೀಕರಿಸಬಹುದಾದ ಇಂಧನಕ್ಕೆ ಹಾಕುವ ಬಗ್ಗೆ ವಿವರಿಸಿದ್ದರು.

ಗೌತಮ್ ಅದಾನಿಯ ಕೊಡುಗೆ ಹೆಚ್ಚಿದೆ
ಭಾರತದ 100 ಶ್ರೀಮಂತರಲ್ಲಿ ಸಾಮೂಹಿಕವಾಗಿ ಸಂಪತ್ತಿನ ಹೆಚ್ಚಳದಲ್ಲಿ ಐದನೇ ಒಂದು ಭಾಗವು ಗೌತಮ್ ಅದಾನಿಯಿಂದ ಬಂದಿದ್ದು, ಅವರು ಸತತ ಮೂರನೇ ವರ್ಷ 2ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅದಾನಿ ಅವರು ಶೇಕಡಾವಾರು ಅತಿದೊಡ್ಡ ಲಾಭ ಗಳಿಸುವವರಾಗಿದ್ದು, ಅವರ ಎಲ್ಲ ಲಿಸ್ಟಿಂಗ್ ಕಂಪೆನಿಗಳ ಷೇರುಗಳ ಬೆಲೆ ಗಗನಕ್ಕೇರಿದ್ದರಿಂದ ಸಂಪತ್ತು ಸುಮಾರು 25.2 ಶತಕೋಟಿ ಅಮೆರಿಕನ್ ಡಾಲರ್‌ನಿಂದ ಸುಮಾರು 74.8 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮೂರು ಪಟ್ಟು ಹೆಚ್ಚಿಸಿದೆ.

31 ಬಿಲಿಯನ್ ಡಾಲರ್‌ನೊಂದಿಗೆ 3ನೇ ಸ್ಥಾನದಲ್ಲಿರುವ ಎಚ್ಸಿಎಲ್ ಟೆಕ್ನಾಲಜೀಸ್ ಸಂಸ್ಥಾಪಕ ಶಿವ ನಾಡಾರ್, ತಮ್ಮ ನಿವ್ವಳ ಮೌಲ್ಯದಲ್ಲಿ 10.6 ಬಿಲಿಯನ್ ಡಾಲರ್ ಹೆಚ್ಚಳವನ್ನು ಕಂಡಿದ್ದಾರೆ. ರೀಟೇಲ್ ವ್ಯವಹಾರದಲ್ಲಿ ದೊಡ್ಡ ಹೆಸರು ಮಾಡಿರುವ ರಾಧಾಕಿಶನ್ ದಮಾನಿ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದು, ಅವರ ನಿವ್ವಳ ಮೌಲ್ಯವು ಸುಮಾರು 15.4 ಬಿಲಿಯನ್ ಡಾಲರ್‌ಗಳಿಂದ 29.4 ಬಿಲಿಯನ್‌ ಡಾಲರ್ಗೆ ದ್ವಿಗುಣಗೊಂಡಿದೆ. ಏಕೆಂದರೆ ಅವರ ಸೂಪರ್‌ಮಾರ್ಕೆಟ್ ಚೈನ್ ಅವೆನ್ಯೂ ಸೂಪರ್‌ಮಾರ್ಟ್‌ಗಳು ಮಾರ್ಚ್ ಅಂತ್ಯದ ಹಣಕಾಸು ವರ್ಷದಲ್ಲಿ 22 ಹೊಸ ಮಳಿಗೆಗಳನ್ನು ತೆರೆದವು.

ಭಾರತವು ಇಲ್ಲಿಯವರೆಗೆ 870 ದಶಲಕ್ಷಕ್ಕೂ ಹೆಚ್ಚು ಕೊವಿಡ್ -19 ಲಸಿಕೆಗಳನ್ನು ನೀಡಿದೆ. ಇದಕ್ಕಾಗಿ ಭಾಗಶಃ ಲಸಿಕೆಯನ್ನು ತಯಾರಿಸಿದ ಶತಕೋಟ್ಯಧಿಪತಿ ಸೈರಸ್ ಪೂನಾವಾಲಾ ಸ್ಥಾಪನೆಯ ಭಾರತದ ಸೀರಮ್ ಇನ್‌ಸ್ಟಿಟ್ಯೂಟ್‌ಗೆ ಧನ್ಯವಾದ ಹೇಳಬೇಕು. ಅವರು 19 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ಅಗ್ರ ಐದನೇ ಸ್ಥಾನದಲ್ಲಿದ್ದಾರೆ. ಅವರ ಖಾಸಗಿ ಕಂಪನಿಯು ಅಸ್ಟ್ರಾಜೆನೆಕಾದ ಪರವಾನಗಿ ಅಡಿಯಲ್ಲಿ ಕೋವಿಶೀಲ್ಡ್ ಅನ್ನು ತಯಾರಿಸುತ್ತದೆ ಮತ್ತು ಇತರ ಕೊವಿಡ್ -19 ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಸೌರ ವಿದ್ಯುತ್‌ ವಲಯದಲ್ಲಿ ಅಂಬಾನಿ-ಅದಾನಿ ನಡುವೆ ಭಾರಿ ಪೈಪೋಟಿ, ದರ ಇಳಿಕೆ ನಿರೀಕ್ಷೆ

ಫೋರ್ಬ್ಸ್‌ 100ರಲ್ಲಿ ಸ್ಥಾನ ಪಡೆಯಲು 2 ಬಿಲಿಯನ್ ಡಾಲರ್‌ ಆಸ್ತಿ ಇರಬೇಕು
ಏಷ್ಯಾ ವೆಲ್ತ್ ಸಂಪಾದಕ ಮತ್ತು ಫೋರ್ಬ್ಸ್ ಏಷ್ಯಾದ ಭಾರತ ಸಂಪಾದಕ ನಾಜ್ನೀನ್ ಕರ್ಮಾಲಿ ಹೇಳುವಂತೆ, ಈ ವರ್ಷ ಭಾರತದಲ್ಲಿ ವಿ-ಆಕಾರದ ಚೇತರಿಕೆಯ ಭರವಸೆಗಳು ಷೇರು ಮಾರುಕಟ್ಟೆಯ ಏರಿಕೆಗೆ ಉತ್ತೇಜನ ನೀಡಿತು. ಇದು ಭಾರತದ ಶ್ರೀಮಂತರ ಅದೃಷ್ಟವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿತು. ಅಗ್ರ 100ರ ಶ್ರೇಯಾಂಕದ ಪಟ್ಟಿಯೊಳಗೆ ಸ್ಥಾನ ಪಡೆಯುವುದಕ್ಕೆ ಕನಿಷ್ಠ 2 ಬಿಲಿಯನ್ ಡಾಲರ್ ನಿವ್ವಳ ಮೌಲ್ಯ ಹೊಂದಿರಬೇಕು.

ಈ ವರ್ಷದ ಪಟ್ಟಿಯಲ್ಲಿ ಆರು ಮಂದಿ ಹೊಸಬರು ಇದ್ದು, ಅವರಲ್ಲಿ ಅರ್ಧದಷ್ಟು ಮಂದಿ ರಾಸಾಯನಿಕ ಕ್ಷೇತ್ರದಿಂದ ಬಂದಿದ್ದಾರೆ. ಅವರಲ್ಲಿ ಅಶೋಕ್ ಬೂಬ್ (ಸಂಖ್ಯೆ 93, 2.3 ಬಿಲಿಯನ್ ಯುಎಸ್ಡಿ) ಅವರ ಕ್ಲೀನ್ ಸೈನ್ಸ್ ಮತ್ತು ಟೆಕ್ನಾಲಜಿಯನ್ನು ಜುಲೈನಲ್ಲಿ ಲಿಸ್ಟ್ ಮಾಡಲಾಗಿದೆ. ದೀಪಕ್ ಮೆಹ್ತಾ (ನಂ. 97, 2.05 ಬಿಲಿಯನ್ ಯುಎಸ್ಡಿ) ದೀಪಕ್ ನೈಟ್ರೈಟ್ ಮತ್ತು ಯೋಗೀಶ್ ಕೊಠಾರಿ (ನಂ. 100, 1.94 ಬಿಲಿಯನ್ ಯುಎಸ್ಡಿ) ಅಲ್ಕಿಲ್ ಅಮೀನ್ಸ್ ಕೆಮಿಕಲ್ಸ್. ಅರವಿಂದ ಲಾಲ್ (ನಂ. 87, 2.55 ಬಿಲಿಯನ್ ಯುಎಸ್ಡಿ), ಡಯಾಗ್ನೋಸ್ಟಿಕ್ಸ್ ಚೈನ್ ಡಾಲಾಲ್ ಪಥ್ ಲ್ಯಾಬ್ಸ್ ಕಾರ್ಯನಿರ್ವಾಹಕ ಅಧ್ಯಕ್ಷರು ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಕಾರಣದಿಂದ ಕಂಡ ಏರಿಕೆಯಿಂದಾಗಿ ಕಳೆದ ವರ್ಷದಲ್ಲಿ ಕಂಪೆನಿಯ ಷೇರುಗಳು ದ್ವಿಗುಣಗೊಂಡವು.

ಅಮೆರಿಕ, ಚೀನಾದಂತೆ 2047ಕ್ಕೆ ಭಾರತವೂ ಶ್ರೀಮಂತವಾಗಲಿದೆ: ಮುಕೇಶ್‌ ಅಂಬಾನಿ

ಹನ್ನೊಂದು ಮಂದಿ ಹೆಸರು ಕೈ ಬಿಡಲಾಗಿದೆ
ದೇಶದಲ್ಲಿ ಬಂದ ದೊಡ್ಡ ಪ್ರಮಾಣದ ಐಪಿಒ ರಿಯಲ್ ಎಸ್ಟೇಟ್ ಆಸ್ತಿ ಉದ್ಯಮಿ ಮತ್ತು ರಾಜಕಾರಣಿ ಮಂಗಲ್ ಪ್ರಭಾತ್ ಲೋಧಾ (ನಂ. 42, 4.5 ಬಿಲಿಯನ್ ಯುಎಸ್ಡಿ)ಗೆ ನೆರವು ನೀಡಿತು. ಅವರ ಮ್ಯಾಕ್ರೊಟೆಕ್ ಡೆವಲಪರ್‌ಗಳ ಏಪ್ರಿಲ್ನಲ್ಲಿ ಲಿಸ್ಟಿಂಗ್ ನಂತರ ಶ್ರೇಣಿಗೆ ಮರಳಿತು. ಹೀಗೆ ಹಿಂತಿರುಗಿದ ಇತರ ನಾಲ್ಕು ಜನರಲ್ಲಿ ಪ್ರತಾಪ ರೆಡ್ಡಿ (ಸಂಖ್ಯೆ 88, 2.53 ಬಿಲಿಯನ್ ಯುಎಸ್ಡಿ) ಕೂಡ ಸ್ಥಾನ ಪಡೆದಿದ್ದಾರೆ. ಅವರ ಲಿಸ್ಟೆಡ್ ಆಸ್ಪತ್ರೆ ಚೈನ್ ಅಪೊಲೊ ಆಸ್ಪತ್ರೆಗಳ ಉದ್ಯಮವು ಕೊವಿಡ್-19 ರೋಗಿಗಳನ್ನು ಪರೀಕ್ಷಿಸುತ್ತಿದೆ ಮತ್ತು ಚಿಕಿತ್ಸೆ ನೀಡುತ್ತಿದೆ.

ಕಳೆದ ವರ್ಷ ಪಟ್ಟಿಯಲ್ಲಿ ಇದ್ದ ಹನ್ನೊಂದು ಮಂದಿಯನ್ನು ಕೈಬಿಡಲಾಯಿತು. ಈ ವರ್ಷದ ಪಟ್ಟಿಗೆ ಪ್ರವೇಶ ಪಡೆಯಲು ಹೆಚ್ಚಿದ ಕಡಿತವನ್ನು ಮಾಡಲಾಗಿದೆ. ಈ ವರ್ಷದ ಪಟ್ಟಿಯನ್ನು ತಯಾರಿಸಲು ಅಗತ್ಯವಿರುವ ಕನಿಷ್ಠ ಮೊತ್ತವು 1.94 ಬಿಲಿಯನ್ ಡಾಲರ್ ಆಗಿದ್ದು, ಕಳೆದ ವರ್ಷ 1.33 ಶತಕೋಟಿ ಡಾಲರ್ ಇತ್ತು.

ಭಾರತದ ಅಗ್ರ 10 ಶ್ರೀಮಂತರು:

 • ಮುಕೇಶ್ ಅಂಬಾನಿ- USD 92.7 ಬಿಲಿಯನ್
 • ಗೌತಮ್ ಅದಾನಿ- USD 74.8 ಬಿಲಿಯನ್
 • ಶಿವ್ ನಾಡಾರ್- USD 31 ಬಿಲಿಯನ್
 • ರಾಧಕಿಶನ್ ದಮಾನಿ- USD 29.4 ಬಿಲಿಯನ್
 • ಸೈರಸ್ ಪೂನವಲ್ಲ- USD 19 ಬಿಲಿಯನ್
 • ಲಕ್ಷ್ಮಿ ಮಿತ್ತಲ್- USD 18.8 ಬಿಲಿಯನ್
 • ಸಾವಿತ್ರಿ ಜಿಂದಾಲ್- USD 18 ಬಿಲಿಯನ್
 • ಉದಯ್ ಕೋಟಕ್- USD 16.5 ಬಿಲಿಯನ್
 • ಪಲ್ಲೊಂಜಿ ಮಿಸ್ತ್ರಿ- USD 16.4 ಬಿಲಿಯನ್
 • ಕುಮಾರ್ ಬಿರ್ಲಾ- USD 15.8 ಬಿಲಿಯನ್

Source link

x

Check Also

ಮೈಸೂರು ಅತ್ಯಾಚಾರ ಪ್ರಕರಣ: ನಾನು ಉಡಾಫೆ ಹೇಳಿಕೆಗಳನ್ನು ನೀಡೊಲ್ಲ ಎಂದ ಸಚಿವ ಸೋಮಣ್ಣ

ಹೈಲೈಟ್ಸ್‌: ಮೈಸೂರಿನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ವಿಚಾರ ರಾಜಕೀಯ ಪಕ್ಷಗಳು, ನಾಯಕರ ನಡುವಿನ ಮಾತಿನ ಸಮರ ಉಡಾಫೆಯ ಹೇಳಿಕೆಗಳನ್ನು ...