Home » Kannada News » ವರಮಹಾಲಕ್ಷ್ಮೀ ಹಬ್ಬದ ದಿನ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೇಗಿದೆ ಗೊತ್ತಾ? ಈ ಸುದ್ದಿ ಓದಿ

ವರಮಹಾಲಕ್ಷ್ಮೀ ಹಬ್ಬದ ದಿನ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೇಗಿದೆ ಗೊತ್ತಾ? ಈ ಸುದ್ದಿ ಓದಿ

ಹೈಲೈಟ್ಸ್‌:

  • ಚಿನ್ನ ಬೆಳ್ಳಿಯ ದರದಲ್ಲಿ ಮತ್ತೆ ಮುಂದುವರಿದ ಹಾವು ಏಣಿಯಾಟ
  • ಈ ವಾರ ಚಿನ್ನಾಭರಣ ಬೆಲೆ ಇಳಿಕೆಯ ಆಸೆ ಕಂಡಿದ್ದ ಗ್ರಾಹಕರಿಗೆ ಖುಷಿ
  • ಎರಡು ದಿನದ ಹಿಂದೆ ಏರಿದ್ದ ಬೆಲೆ ಮತ್ತೆ ಕುಸಿದು ಹಿಂದಿನ ಬೆಲೆಗೆ ತಲುಪಿದೆ
  • ಹೀಗಾಗಿ ಇಂದು ಬೆಳಗಿನ ವೇಳೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ದರದಲ್ಲಿ ಇಳಿಕೆ

ಬೆಂಗಳೂರು: ಕಳೆದ ಕೆಲ ಸಮಯಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಲೇ ಬಂದಿದ್ದ ಚಿನ್ನದ ದರ, ಆಭರಣಪ್ರಿಯರಿಗೆ ನಿರಾಸೆ ಮೂಡಿಸಿತ್ತು. ಇಂದು ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ. ಹೀಗಾಗಿ ಸಹಜವಾಗಿಯೇ ಬಂಗಾರ ಪ್ರಿಯರು ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದಾರೆ. ಇಂದು ಶುಕ್ರವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ ₹4,713 ದಾಖಲಾಗಿದೆ. ಆ ಮೂಲಕ ಮತ್ತೆ ಬೆಲೆ ಏರಿಕೆಯಾಗಿದೆ.

ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು (ಶುಕ್ರವಾರ) ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ₹44,100 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ ₹48,100 ರೂಪಾಯಿ ದಾಖಲಾಗಿದೆ.
ವಾವ್‌! ಚಿನ್ನ ಪ್ರಿಯರಿಗೆ ಗುಡ್‌ನ್ಯೂಸ್‌; ಮತ್ತೆ ಕುಸಿದ ಗೋಲ್ಡ್‌ ದರ! ನೀವು ಇಂದೇ ಚಿನ್ನಾಭರಣ ಖರೀದಿಸಿ
ಬೆಳ್ಳಿ ದರ:
ದೇಶದಲ್ಲಿ ಬೆಳ್ಳಿ ಬೆಲೆ ಇಂದು ಒಂದು ಕೆಜಿಗೆ ₹62,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ₹62,500 ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿ ₹67,400 ರೂ ನಿಗದಿಯಾಗಿದೆ.

ಪ್ರಮುಖ ನಗರಗಳಲ್ಲಿ ಇಂದು 10 ಗ್ರಾಂ ಚಿನ್ನದ ಬೆಲೆ ಹೀಗಿದೆ:
ಬೆಂಗಳೂರು: ₹44,100 (22 ಕ್ಯಾರಟ್‌) ₹48,100 (24 ಕ್ಯಾರಟ್‌)
ಚೆನ್ನೈ: ₹44,490 (22 ಕ್ಯಾರಟ್‌) ₹48,540 (24 ಕ್ಯಾರಟ್‌)
ದಿಲ್ಲಿ: ₹46,250 (22 ಕ್ಯಾರಟ್‌), ₹50,450 (24 ಕ್ಯಾರಟ್‌)
ಹೈದರಾಬಾದ್‌: ₹44,100 (22 ಕ್ಯಾರಟ್‌) ₹48,100 (24 ಕ್ಯಾರಟ್‌)
ಕೋಲ್ಕತಾ: ₹46,600 (22 ಕ್ಯಾರಟ್‌), ₹49,300 (24 ಕ್ಯಾರಟ್‌)
ಮಂಗಳೂರು: ₹44,100 (22 ಕ್ಯಾರಟ್‌) ₹48,100 (24 ಕ್ಯಾರಟ್‌)
ಮುಂಬಯಿ: ₹46,130(22 ಕ್ಯಾರಟ್‌), ₹47,130 (24 ಕ್ಯಾರಟ್‌
ಮೈಸೂರು: ₹44,100 (22 ಕ್ಯಾರಟ್‌) ₹48,100 (24 ಕ್ಯಾರಟ್‌)

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದು ಬೆಳಗ್ಗಿನ ವೇಳೆಗೆ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವೆಡೆ ಇಳಿಕೆ ಕಂಡು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.


Source link

x

Check Also

ಈ ರಾಶಿಯವರಿಗಿಂದು ತುಂಬಾನೇ ಲಾಭದ ದಿನ..! ಇಂದಿನ ಶುಭ, ಅಶುಭಗಳನ್ನು ತಿಳಿದುಕೊಳ್ಳಿ..

2021 ಆಗಸ್ಟ್‌ 20 ರ ಶುಕ್ರವಾರವಾದ ಇಂದು, ಚಂದ್ರನ ಸಂವಹನವು ಶನಿಯ ರಾಶಿ ಚಿಹ್ನೆಯಾದ ಮಕರ ರಾಶಿಯಲ್ಲಿ ಹಗಲು ರಾತ್ರಿ ...