Home » Kannada News » 18 ವರ್ಷದ ಪುತ್ರನಿಗೋಸ್ಕರ ಮಾಜಿ ಪತ್ನಿ ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್

18 ವರ್ಷದ ಪುತ್ರನಿಗೋಸ್ಕರ ಮಾಜಿ ಪತ್ನಿ ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್

ಹೈಲೈಟ್ಸ್‌:

  • ವಿಚ್ಛೇದನ ಪಡೆದಿರುವ ನಟಿ ಮಲೈಕಾ ಅರೋರ, ಅರ್ಬಾಜ್ ಖಾನ್
  • ಮಲೈಕಾ ಅರೋರ, ಅರ್ಬಾಜ್ ಖಾನ್ ದಂಪತಿಗೆ 18 ವರ್ಷದ ಪುತ್ರನಿದ್ದಾನೆ
  • ಪುತ್ರನಿಗೋಸ್ಕರ ಮಾಜಿ ಪತಿ ಜೊತೆ ಮಲೈಕಾ ಅರೋರ ರೆಸ್ಟೋರೆಂಟ್‌ವೊಂದರಲ್ಲಿ ಊಟ ಮಾಡಿದ್ದಾರೆ

ನಟಿ ಮಲೈಕಾ ಅರೋರ ಹಾಗೂ ಅರ್ಬಾಜ್ ಖಾನ್ ವಿಚ್ಛೇದನ ಪಡೆದು ದೂರ ದೂರ ಆಗಿದ್ದಾರೆ. ಈ ದಂಪತಿಗೆ ಅರ್ಹಾನ್ ಎಂಬ ಪುತ್ರ ಕೂಡ ಇದ್ದಾನೆ. ಮುಂಬೈನಲ್ಲಿ ರೆಸ್ಟೋರೆಂಟ್‌ವೊಂದರಲ್ಲಿ ಅರ್ಹಾನ್, ಮಲೈಕಾ ಅರೋರ, ಅರ್ಬಾಜ್ ಖಾನ್, ಜೋಯ್ಸ್ ಅರೋರ ಊಟ ಮಾಡಿದ್ದಾರೆ. ಬೇರೆ ಬೇರೆ ಆಗಿದ್ದರೂ ಕೂಡ ಮಗನಿಗೋಸ್ಕರ ಈ ದಂಪತಿ ಬಿಡುವು ಮಾಡಿಕೊಂಡು ಒಂದೇ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ದಾರೆ.

ಇನ್ನೇನು ಊಟ ಮುಗಿಸಿ ಹೋಗುತ್ತಿದ್ದ ಅರ್ಬಾಜ್ ಖಾನ್‌ರನ್ನು ಮಲೈಕಾ ತಾಯಿ ಜೋಯ್ಸ್ ಅವರು ಕರೆದು ಕೆನ್ನೆಗೆ ಮುತ್ತಿಟ್ಟಿದ್ದಾರೆ. ಮಲೈಕಾ ಹಾಗೂ ಅರ್ಬಾಜ್ ಖಾನ್ 2017ರಲ್ಲಿ ದೂರ ದೂರ ಆಗಿದ್ದರು. ವಿಚ್ಛೇದನ ಪಡೆಯುತ್ತಿದ್ದಂತೆ ಈ ಜೋಡಿ ಟ್ರೋಲ್‌ಗೊಳಗಾಗಿತ್ತು. ಈ ಬಗ್ಗೆ ಸಂದರ್ಶನವೊಂದರಲ್ಲಿ ಅರ್ಬಾಜ್ ಮಾತನಾಡಿದ್ದಾರೆ.

ಗರ್ಲ್‌ಫ್ರೆಂಡ್ ಮಲೈಕಾ ಅರೋರ ಆಸ್ತಿ ವಿಚಾರವಾಗಿ ಕೆಂಡವಾದ ನಟ ಅರ್ಜುನ್ ಕಪೂರ್

“ಅಭಿಮಾನಿಗಳು, ಅನುಯಾಯಿಗಳು ಒಂದು ಜೋಡಿ ಇಷ್ಟಪಟ್ಟರೆ ಅವರು ಸದಾ ಒಂದಾಗಿರಬೇಕು ಎಂದು ಬಯಸುತ್ತಾರೆ. ಆಮೀರ್ ಹಾಗೂ ಕಿರಣ್ ಜೋಡಿಗೂ ಕೂಡ ಹಾಗೆ ಆಗಿತ್ತು. ನಿಜಕ್ಕೂ ಈ ರೀತಿಯ ಘಟನೆ ನಡೆಯತ್ತೆ. ನಾವು ಬೇರೆಯಾದೆವು ಎಂದಮಾತ್ರಕ್ಕೆ ಕೆಟ್ಟವರು ಎಂದರ್ಥವಲ್ಲ. ಅವರು ಕೂಡ ಇಬ್ಬರು ವ್ಯಕ್ತಿಗಳು. ಒಮ್ಮೊಮ್ಮೆ ನಾವು ನಡೆಯುವ ದಾರಿ ಚೆನ್ನಾಗಿರುತ್ತದೆ, ಸುಂದರವಾಗಿರುತ್ತದೆ. ಇನ್ನೊಮ್ಮೆ ನೀವು ಬೇರೆ ಬೇರೆ ದಾರಿಯಲ್ಲಿ ಹೋಗಬಹುದು” ಎಂದು ಅರ್ಬಾಜ್ ಖಾನ್ ಹೇಳಿದ್ದಾರೆ.

‘ಮುನ್ನಿ ಬದನಾಮ್ ಹುಯೀ’ ಐಟಂ ಹಾಡು ಕಲಿತ್ರೆ ಮಾತ್ರ ಈ ಶಾಲೆಯಲ್ಲಿ ಪಾಸ್ ಆಗ್ಬೋದು!

“ಬೇರೆ ಬೇರೆ ವ್ಯಕ್ತಿಯಾಗಿ ಬೆಳೆದಿರುತ್ತೀರಿ. ಹೀಗಾಗಿ ಅವರು ಖುಷಿಯಿಂದಿರಲು ಬಿಡಬೇಕು. ನಮ್ಮ ಸಂಬಂಧದ ಬಗ್ಗೆ ಯಾರೂ ಏನೇ ಹೇಳಿದ್ರೂ ಕೂಡ ಅದು ನನಗೆ ಸಮಸ್ಯೆಯಾಗಲೇ ಇಲ್ಲ. ನಾವು ಅದನ್ನೆಲ್ಲ ದಾಟಿಕೊಂಡು ಮುಂದೆ ಹೋಗುತ್ತಿರಬೇಕು” ಎಂದು ನಟ ಅರ್ಬಾಜ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1998ರಲ್ಲಿ ಮಲೈಕಾ, ಅರ್ಬಾಜ್ ಮದುವೆಯಾಗಿದ್ದರು. ಈ ಜೋಡಿಗೆ 18 ವರ್ಷದ ಅರ್ಹಾನ್ ಎಂಬ ಪುತ್ರನಿದ್ದಾನೆ. ಮಲೈಕಾ ಅರೋರ ಅವರು ನಟ ಅರ್ಜುನ್ ಕಪೂರ್ ಜೊತೆ ಡೇಟ್ ಮಾಡುತ್ತಿದ್ದಾರೆ. 2018ರಲ್ಲಿ ಅವರಿಬ್ಬರ ತಮ್ಮ ಸಂಬಂಧದ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದರು. ನಟಿ ಜಾರ್ಜಿಯಾ ಜೊತೆಗೆ ಅರ್ಬಾಜ್ ಇದ್ದಾರೆ.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...