Home » Kannada News » Bigg Boss 8 Kannada Final Live: ‘ಬಿಗ್ ಬಾಸ್ ಕನ್ನಡ 8’ ಗ್ರ್ಯಾಂಡ್ ಫಿನಾಲೆಗೆ ಧನುಶ್ರೀ, ಚಂದ್ರಕಲಾ ಗೈರಾಗಿದ್ದೇಕೆ?

Bigg Boss 8 Kannada Final Live: ‘ಬಿಗ್ ಬಾಸ್ ಕನ್ನಡ 8’ ಗ್ರ್ಯಾಂಡ್ ಫಿನಾಲೆಗೆ ಧನುಶ್ರೀ, ಚಂದ್ರಕಲಾ ಗೈರಾಗಿದ್ದೇಕೆ?

6.29: ಮಂಜು ಪಾವಗಡ ಡ್ರೆಸ್ ನೋಡಿ ಮುಂದಿನ ಸೀಸನ್‌ನಲ್ಲಿ ಮಂಜು ಅವರನ್ನೇ ನಿರೂಪಕರಾಗಿ ಆಯ್ಕೆ ಮಾಡಿಕೊಳ್ಳಬಹುದಾ ಅಂತ ಕಿಚ್ಚ ಸುದೀಪ್‌ಗೆ ಆತಂಕ ಶುರುವಾಗಿದೆಯಂತೆ.

6.24-ಪಾಂಡಿಚೇರಿಗೆ ಹಾಲಿಡೇ ಹೋಗಿದ್ದ ಧನುಶ್ರೀ, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಚಂದ್ರಕಲಾ ಮೋಹನ್ ಅವರು ಶನಿವಾರದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ರವಿವಾರದ ಗ್ರ್ಯಾಂಡ್ ಫಿನಾಲೆಗೆ ಅವರಿಬ್ಬರು ಹಾಜರಿ ಹಾಕಿದ್ದರು.

6.17-ದಿವ್ಯಾ ಉರುಡುಗ, ಕೆಪಿ ಅರವಿಂದ್, ಮಂಜು ಪಾವಗಡ ಅವರು ಬಿಗ್ ಬಾಸ್ ಗ್ರ್ಯಾಂಡ್ ಪಿನಾಲೆಗೆ ರೆಡಿಯಾಗಿದ್ದಾರೆ.

6.05-ಯಾರೋ ಒಬ್ಬರು ವೀಕ್ ಎಂದರು ಅಂತ ಎಲ್ಲರೂ ನನ್ನನ್ನು ವೀಕ್ ಅಂತ ಹೇಳಬಹುದೇ? ನಾನು ಎಲ್ಲಿಯೂ ಕಡಿಮೆ ಪ್ರಯತ್ನ ಹಾಕಿ ಆಟ ಆಡಿಲ್ಲ ಎಂದು ದಿವ್ಯಾ ಉರುಡುಗ ಅವರು ಅರವಿಂದ್ ಹಾಗೂ ಮಂಜು ಪಾವಗಡ ಬಳಿ ಹೇಳಿಕೊಂಡಿದ್ದಾರೆ.

6.00-ಶೂಟಿಂಗ್ ಆಗಿ ಮೂರು ನಾಲ್ಕು ಗಂಟೆಗಳಿಗೆ ಎಡಿಟ್ ಆಗಿ ಪ್ರಸಾರ ಆಗತ್ತೆ. ಶನಿವಾರ ನಡೆದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಇಂಟರ್‌ನೆಟ್ ಸಮಸ್ಯೆಯಿಂದ ಪ್ರಚಾರದಲ್ಲಿ ಅಡಚಣೆ ಆಗಿತ್ತು ಎಂದು ನಟ ಕಿಚ್ಚ ಸುದೀಪ್ ಹೇಳಿದ್ದಾರೆ. ಲಾಕ್‌ಡೌನ್ ಆಗಿ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್‌ ಮತ್ತೆ ಮುಂದುವರಿಯತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ. ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದ ವೇದಿಕೆಯಲ್ಲಿ ನಾವು ಇರುತ್ತೇವೆ ಅಂತ ಅಂದುಕೊಂಡಿರಲಿಲ್ಲ ಎಂದು ಕೂಡ ಸುದೀಪ್ ಹೇಳಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 8ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಕೆಲವೇ ಕ್ಷಣಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ದಿವ್ಯಾ ಉರುಡುಗ, ಮಂಜು ಪಾವಗಡ, ಕೆಪಿ ಅರವಿಂದ್ ಅವರಲ್ಲಿ ಯಾರು ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆಲ್ಲಲಿದ್ದಾರೆ ಎಂಬ ಕುತೂಹಲವಿದೆ.


Source link

x

Check Also

ಶಾಲೆಗಳಲ್ಲಿ ಕಲಿಸುತ್ತಾರೆ ಜೀವನ ಪಾಠ..! ಶ್ರೀನಾಥ್ ಭಲ್ಲೆ ಅಮೆರಿಕ ಅನುಭವ ಕಥನ – ಭಾಗ 23

ಈ ದೇಶಕ್ಕೆ ಬಂದ ಆರಂಭದಲ್ಲೇ ನಮ್ಮ ಕಂಪನಿಯವರು ಅಮೆರಿಕನ್ ಆಂಗ್ಲದ ಪರಿಚಯ ಮಾಡಿಸಲೆಂದೇ ESL – English as Second ...