Home » Tag: ಬಿಗ್ ಬಾಸ್

Tag Archives: ಬಿಗ್ ಬಾಸ್

ಕನ್ನಡ ಬಿಗ್ ಬಾಸ್ ಮಿನಿ ಸೀಸಸ್‌ಗೆ ಕಿಚ್ಚ ಸುದೀಪ್ ಎಂಟ್ರಿ; ನೆಚ್ಚಿನ ಟಿವಿ ತಾರೆಯರ ರಿಯಲ್ ಆಟವಿದು!

ಹೈಲೈಟ್ಸ್‌: ಬಿಗ್ ಬಾಸ್ ಮಿನಿ ಸೀಸನ್ ಆಗಸ್ಟ್ 14ರಿಂದ ಆರಂಭ 14 ಟಿವಿ ತಾರೆಯರ ಬಿಗ್ ಬಾಸ್ ಮಿನಿ ಸೀಸನ್ ಅಕುಲ್ ಬಾಲಾಜಿ, ನಿರಂಜನ್ ದೇಶಪಾಂಡೆ ಕೂಡ ಈ ಶೋನಲ್ಲಿ ಇರಲಿದ್ದಾರೆ ನೆಚ್ಚಿನ ತಾರೆಯರು ನಿಜವಾದ ವ್ಯಕ್ತಿತ್ವದೊಂದಿಗೆ ಆಟ ಆಡಲಿದ್ದಾರೆ ಜನ-ಮನ ಮೆಚ್ಚಿದ ನಟ-ನಟಿಯರನ್ನು ಒಳಗೊಂಡ ‘ಬಿಗ್ ಬಾಸ್ ಫ್ಯಾಮಿಲಿ ಅವಾರ್ಡ್ಸ್’ ಮಿನಿ ಸೀಸನ್ ಶೋ ಆಗಸ್ಟ್ 14ರಿಂದ ಪ್ರಸಾರ ಆಗ್ತಿದೆ. ಈ ಶೋ ‘ಬಿಗ್ ಬಾಸ್ ಮಿನಿ ಸೀಸನ್‘ ಆಗಿದ್ದು ಕಲರ್ಸ್ ಕನ್ನಡದ ಧಾರಾವಾಹಿ ನಟ-ನಟಿಯರು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಶನಿವಾರ-ಭಾನುವಾರ ಮಧ್ಯಾಹ್ನ ...

Read More »

BBK8 Winner: ಅತ್ತ ಕಣ್ಣೀರಿಟ್ಟ ದಿವ್ಯಾ ಉರುಡುಗ: ಇತ್ತ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟ ದಿವ್ಯಾ ಸುರೇಶ್!

ಹೈಲೈಟ್ಸ್‌: ಹಲವು ಅಚ್ಚರಿಗಳಿಗೆ ಸಾಕ್ಷಿಯಾದ ‘ಬಿಗ್ ಬಾಸ್ ಕನ್ನಡ 8’ ಗ್ರ್ಯಾಂಡ್ ಫಿನಾಲೆ ಕಣ್ಣೀರು ಹಾಕಿದ ದಿವ್ಯಾ ಉರುಡುಗ ಮಂಜು ಪಾವಗಡ ಗೆದ್ದಿದ್ದಕ್ಕೆ ಕುಣಿದು ಕುಪ್ಪಳಿಸಿದ ದಿವ್ಯಾ ಸುರೇಶ್ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದಲ್ಲಿ ಮಹಿಳಾ ಸ್ಪರ್ಧಿಗಳ ಪೈಕಿ ಹೆಚ್ಚು ಗಮನ ಸೆಳೆದವರು ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ. ಅತ್ತ ಮಂಜು ಪಾವಗಡ ಜೊತೆ ದಿವ್ಯಾ ಸುರೇಶ್ ಗೆಳೆತನ ಗಟ್ಟಿಯಾಗಿದ್ದರೆ, ಇತ್ತ ಅರವಿಂದ್ ಜೊತೆ ದಿವ್ಯಾ ಉರುಡುಗ ಆತ್ಮೀಯವಾಗಿದ್ದರು.ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದ ದಿವ್ಯಾ ಸುರೇಶ್ ಟಾಪ್ 5 ಹಂತಕ್ಕೆ ಕಾಲಿಡುವ ...

Read More »

Bigg Boss 8 Kannada Final Live: ‘ಬಿಗ್ ಬಾಸ್ ಕನ್ನಡ 8’ ಗ್ರ್ಯಾಂಡ್ ಫಿನಾಲೆಗೆ ಧನುಶ್ರೀ, ಚಂದ್ರಕಲಾ ಗೈರಾಗಿದ್ದೇಕೆ?

6.29: ಮಂಜು ಪಾವಗಡ ಡ್ರೆಸ್ ನೋಡಿ ಮುಂದಿನ ಸೀಸನ್‌ನಲ್ಲಿ ಮಂಜು ಅವರನ್ನೇ ನಿರೂಪಕರಾಗಿ ಆಯ್ಕೆ ಮಾಡಿಕೊಳ್ಳಬಹುದಾ ಅಂತ ಕಿಚ್ಚ ಸುದೀಪ್‌ಗೆ ಆತಂಕ ಶುರುವಾಗಿದೆಯಂತೆ. 6.24-ಪಾಂಡಿಚೇರಿಗೆ ಹಾಲಿಡೇ ಹೋಗಿದ್ದ ಧನುಶ್ರೀ, ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ಚಂದ್ರಕಲಾ ಮೋಹನ್ ಅವರು ಶನಿವಾರದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮಕ್ಕೆ ಗೈರಾಗಿದ್ದರು. ರವಿವಾರದ ಗ್ರ್ಯಾಂಡ್ ಫಿನಾಲೆಗೆ ಅವರಿಬ್ಬರು ಹಾಜರಿ ಹಾಕಿದ್ದರು.6.17-ದಿವ್ಯಾ ಉರುಡುಗ, ಕೆಪಿ ಅರವಿಂದ್, ಮಂಜು ಪಾವಗಡ ಅವರು ಬಿಗ್ ಬಾಸ್ ಗ್ರ್ಯಾಂಡ್ ಪಿನಾಲೆಗೆ ರೆಡಿಯಾಗಿದ್ದಾರೆ. 6.05-ಯಾರೋ ಒಬ್ಬರು ವೀಕ್ ಎಂದರು ಅಂತ ಎಲ್ಲರೂ ನನ್ನನ್ನು ವೀಕ್ ಅಂತ ಹೇಳಬಹುದೇ? ನಾನು ...

Read More »

BBK8 Finale: ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿಗಳು ಗಳಿಸಿದ ಮತಗಳ ಸಂಖ್ಯೆ ಬಹಿರಂಗ!

ಹೈಲೈಟ್ಸ್‌: ಇದೇ ಮೊದಲ ಬಾರಿಗೆ ಸ್ಪರ್ಧಿಗಳಿಗೆ ಸಿಕ್ಕಿರುವ ಮತಗಳ ಸಂಖ್ಯೆ ರಿವೀಲ್ ಪ್ರಶಾಂತ್ ಸಂಬರಗಿಗೆ ಸಿಕ್ಕಿದೆ 6,69,020 ಮತಗಳು ವೈಷ್ಣವಿಗೆ ಲಭಿಸಿದೆ 10,21,831 ಮತಗಳು ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’. ಇಲ್ಲಿಯವರೆಗೂ ‘ಬಿಗ್ ಬಾಸ್ ಕನ್ನಡ’ದ ಏಳು ಆವೃತ್ತಿಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಸದ್ಯ ನಡೆಯುತ್ತಿದೆ. ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದ ವಿನ್ನರ್ ಯಾರು ಎಂಬುದಕ್ಕೆ ಇಂದು ಉತ್ತರ ಸಿಗಲಿದೆ. ಇಂತಿಪ್ಪ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮದ ಬಗ್ಗೆ ...

Read More »

ಹೊಸ ದಾಖಲೆ ಬರೆದ ‘ಬಿಗ್ ಬಾಸ್’: ವಿನೂತನ ಸಾಧನೆ ಮಾಡಿದ ಟಾಪ್ 5 ಸ್ಪರ್ಧಿಗಳು!

ಹೈಲೈಟ್ಸ್‌: ಹೊಸ ದಾಖಲೆ ಬರೆದ ‘ಬಿಗ್ ಬಾಸ್ ಕನ್ನಡ 8’ ಅತಿ ಹೆಚ್ಚು ದಿನ ನಡೆದ ‘ಬಿಗ್ ಬಾಸ್ ಕನ್ನಡ’ ಕಾರ್ಯಕ್ರಮ ಎನಿಸಿಕೊಂಡಿದೆ ‘ಬಿಗ್ ಬಾಸ್ ಕನ್ನಡ 8’ ‘ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮ 120 ದಿನಗಳ ಕಾಲ ನಡೆದಿದೆ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮ ಅಂತಿಮ ಘಟ್ಟ ತಲುಪಿದೆ. ಗ್ರ್ಯಾಂಡ್ ಫಿನಾಲೆಯ ಟಾಪ್ 3 ಹಂತಕ್ಕೆ ಮಂಜು ಪಾವಗಡ, ಅರವಿಂದ್ ಹಾಗೂ ದಿವ್ಯಾ ಉರುಡುಗ ಲಗ್ಗೆ ಇಟ್ಟಿದ್ದಾರೆ. ಈ ಮೂವರೊಳಗೆ ‘ಬಿಗ್ ಬಾಸ್’ ವಿನ್ನರ್ ಯಾರಾಗ್ತಾರೆ ಎಂಬ ಕುತೂಹಲಕ್ಕೆ ಇಂದು ...

Read More »

‘ತಥಾಸ್ತು’ ಎಂದ ಶಿವಣ್ಣ: ಅಭಿಮಾನಿ ಮಂಜುಗೆ ಸಿಕ್ತು ಹ್ಯಾಟ್ರಿಕ್ ಹೀರೋ ಕಡೆಯಿಂದ ಶುಭ ಸಂದೇಶ!

ಹೈಲೈಟ್ಸ್‌: ‘ಬಿಗ್ ಬಾಸ್’ ಮನೆಯಲ್ಲಿ ಮಂಜು ಪಾವಗಡ ಆಸೆ ಈಡೇರಿದೆ ಮಂಜು ಪಾವಗಡ ಕೋರಿಕೆಗೆ ತಥಾಸ್ತು ಎಂದ ಶಿವರಾಜ್ ಕುಮಾರ್ ಮಂಜುಗಾಗಿ ಬಂತು ಹ್ಯಾಟ್ರಿಕ್ ಹೀರೋ ಶಿವಣ್ಣ ಕಡೆಯಿಂದ ವಿಡಿಯೋ ಸಂದೇಶ ‘ಬಿಗ್ ಬಾಸ್‘ ಮನೆಯಲ್ಲಿ ಮಂಜು ಪಾವಗಡ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ ಅವರ ಬಹುದೊಡ್ಡ ಆಸೆ ಈಡೇರಿದೆ. ಮಂಜು ಪಾವಗಡ ಕೋರಿಕೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಥಾಸ್ತು ಎಂದಿದ್ದಾರೆ. ಗ್ರ್ಯಾಂಡ್ ಫಿನಾಲೆ ತಲುಪಿರುವ ಮಂಜು ಪಾವಗಡಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಎಲ್ಲರ ಆಸೆ ಈಡೇರಿಸುವ ...

Read More »

ಎಂಟನೇ ಅದ್ಭುತ: ಮಂಜು ಜೊತೆಗಿನ ಮುನಿಸು ಮರೆತು ‘ಓ ಗೆಳೆಯ..’ ಎಂದ ಪ್ರಶಾಂತ್ ಸಂಬರಗಿ!

ಹೈಲೈಟ್ಸ್‌: ‘ಬಿಗ್ ಬಾಸ್’ ಮನೆಯಲ್ಲಿ ನಡೆದಿದೆ ಅಚ್ಚರಿಯ ಘಟನೆ! ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ಮತ್ತೆ ಚಿಗುರಿದೆ ಸ್ನೇಹ ”ಮಂಜು ಈಸ್ ಮೈ ಬೆಸ್ಟ್ ಫ್ರೆಂಡ್” ಎಂದ ಪ್ರಶಾಂತ್ ಸಂಬರಗಿ ‘ಬಿಗ್ ಬಾಸ್ ಕನ್ನಡ 8‘ ಕಾರ್ಯಕ್ರಮದಲ್ಲಿ ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮಧ್ಯೆ ಎಲ್ಲವೂ ಸರಿ ಇರಲಿಲ್ಲ. ಇಬ್ಬರ ಮಧ್ಯೆ ಮುನಿಸು ಬೂದಿ ಮುಚ್ಚಿದ ಕೆಂಡದಂತಿತ್ತು. ಆದ್ರೀಗ ಮನಸ್ತಾಪವನ್ನು ಮರೆತು, ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ಪ್ರಶಾಂತ್ ಸಂಬರಗಿ ಹಾಗೂ ಮಂಜು ಪಾವಗಡ ಮತ್ತೆ ಒಂದಾಗಿದ್ದಾರೆ. ಹೌದು.. ನಿಮಗೆ ಅಚ್ಚರಿ ಎನಿಸಿದರೂ ...

Read More »